-->

ತುಳಿದು ಬದುಕುವದಕ್ಕಿಂತ, ತಿಳಿದು ಬದುಕುವದು ಶ್ರೇಷ್ಠ

ತುಳಿದು ಬದುಕುವದಕ್ಕಿಂತ, ತಿಳಿದು ಬದುಕುವದು ಶ್ರೇಷ್ಠ. ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ.   ಆದರೆ, ತಿಳಿದು ಬದುಕಿದವರು ಆಳಿದ ಮೇಲೂ ಉಳಿಯುತ್ತಾರೆ.

ಮೇಲಿನ ವಾಕ್ಯದಲ್ಲಿ ತುಳಿದು ಮತ್ತು ತಿಳಿದು ಎರಡೂ ಶಬ್ದದ ಅರ್ಥಗಳನ್ನು ನಾವು ಮಾನವರಿಗೆ ಅರ್ಥ ಮಾಡಿಕೊಡುತ್ತಿರುವರು. ತುಳಿಯುವದು ನಮ್ಮ ಕಾಲಕೆಳಗೆ ಹಾಕಿ ಒತ್ತುವದು. ಅದರಿಂದ ಕಾಲ ಕೆಳಗಿನ ಜೀವಿಗೆ ತ್ರಾಸ ದುಃಖ ಆಗುವದು. ಯಾವದೇ ವಸ್ತು ಇದ್ದರೆ ಅದು ನಾಶ ಆಗುವದು.


ಈ ಒಂದು ಘಟನೆಗಳು ಹಿಂದಿನ ಕಾಲದಲ್ಲಿ ನಡೆಯುತ್ತಾ ಇದ್ದವು. ಬಡವರು ತಮ್ಮ ಹೊಟ್ಟೆ ಪಾಡಿಗಾಗಿ ತಾವೂ ಇಲ್ಲವೇ ತಮ್ಮ ಮಕ್ಕಳನ್ನು ಊರಿನ ಸಿರಿವಂತರಲ್ಲಿ ಜೀತಕ್ಕೆ ಇಟ್ಟು ಕೊಂಚ ಹಣ ಪಡೆದು ಸಂಸಾರ ಸಾಗಿಸುತ್ತಾ ಇದ್ದರೂ. ಸಾಲವಾಗಿ ಪಡೆದ ಹಣವನ್ನು ತಿರುಗಿ ಕೊಡಲು ಆಗದೇ, ಜೀತಕ್ಕೆ ಇದ್ದವರು ತಲೆ ತಲೆಮಾರು ವರೆಗೆ ದುಡಿಯಲು ಇರುತ್ತಿದ್ದರು. ಸಿರಿವಂತ ವ್ಯಕ್ತಿಗೆ ಬಡವ ಜನ ತನ್ನಲ್ಲಿ ಹೊಟ್ಟೆಗಾಗಿ ಜೀತಕ್ಕೆ ಇದ್ದಾರೆ ಎಂಬ ಪ್ರಜ್ಞೆ ಇರದೇ ಅವರನ್ನು ದಯೆ ಇಲ್ಲದೇ ದುಡಿಸಿಕೊಳ್ಳುತ್ತಿದ್ದರು. ಇದೇ ಗುಣ ಅವರ ಮುಂದಿನ ತಲೆಮಾರಿಗೆ ಬರುವದರಲ್ಲಿ ಸಂಶಯವೇ ಇಲ್ಲ. ಹೀಗೆ ದುಡಿಸಿಕೊಂಡ ಸಿರಿವಂತ ವ್ಯಕ್ತಿ ತನ್ನ ಕೊನೆಯ ಕಾಲದಲ್ಲಿ ಬರ ಬಾರದ ಬೇನೆಗೆ ಆಹುತಿಯಾಗಿ, ಜೀತದ ಆಳುಗಳಿಂದಲೇ ಸೇವೆ ತೆಗೆದುಕೊಳ್ಳುತ್ತಾನೆ. ಹೊರತು ದಯೆ ತೋರಿ ಅವರನ್ನು ಮುಕ್ತಗೊಳಿಸುವದಿಲ್ಲ.ಅದೇ ಬೇನೆಯಲ್ಲಿ ಬೇಗನೆ ಸಾಯುತ್ತಾನೆ.

ತುಳಿದು ಬದುಕುವದಕ್ಕಿಂತ, ತಿಳಿದು ಬದುಕುವದು ಶ್ರೇಷ್ಠ


ಇನ್ನು ತಿಳಿದವರು ಎಂಬ ಶಬ್ದ. ಅಂದರೆ ಜ್ಞಾನ ಇದ್ದ ವ್ಯಕ್ತಿ. ಬಡವರ ಮೇಲೆ ದಯೆ ತೋರಿ, ಆರ್ಥಿಕವಾಗಿ ಹಿಂದುಳಿದ ಬಂಧು ವರ್ಗದವರಿಗೂ ಸಹಾಯ ಮಾಡಿ ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೆ ಆ ವ್ಯಕ್ತಿ ತನ್ನ ಕೊನೆಯ ಉಸಿರು ಇರುವ ವರೆಗೆ ತನಗೆ ಸಹಾಯ ಮಾಡಿದ ಬಂಧು ಇರಲಿ, ಊರಿನ ಸಿರಿವಂತ ರನ್ನು ನೆನೆಯುತ್ತನೆ. ಪ್ರಾಮಾಣಿಕತೆ ಎದ್ದು ಕಾಣುವದು. ಹೀಗಾಗಿ ಜನರ ಮನಸ್ಸು ಗಳಿಸಿ ಅವರ ಕಷ್ಟಕಾಲಕ್ಕೆ ಒದಗಿದ ಸಿರಿವಂತ ತಾನು ಮರಣ ಹೊಂದಿದರು ಎಲ್ಲ ಬಡವರ ಬಾಯಲ್ಲಿ ಇದ್ದು ಹಾಡಿ ಹರಿಸಿ ಕೊಳ್ಳುತ್ತಾನೆ.
ಇದು ಸಮಾಜ ದಲ್ಲಿಯ ಬಡತನದ ಬಗ್ಗೆ ಇರುವ ಒಂದು ತಿಳಿಹೇಳುವ ಮಾತಾಗಿದೆ.

–>