ಪಾಂಡುರಾಜನು ನಾರಾಯಣಾಶ್ರಮ ದಲ್ಲಿರುವಾಗ ಒಂದು ದಿನ ಮುನೀಂದ್ರ ಸಹಿತನಾಗಿ ಬ್ರಹ್ಮದೇವರನ್ನು ಕಾಣುವುದಕ್ಕಾಗಿ ಬ್ರಹ್ಮ ಲೋಕಕ್ಕೆ ತೆರಳಬೇಕೆಂದು ಇಚ್ಛಿಸಿದನು. ಆದರೆ ಮುನಿಗಳು ಆತನನ್ನು ತಡೆದರು.
ಯಾವ ಕಾರ್ಯ ಮಾಡಲು ಭಗವಂತನು ಹುಟ್ಟಿಸಿದ್ದಾನೋ ಆ ಕಾರ್ಯ ಮಾಡದಿದ್ದಲ್ಲಿ ಅವನಿಗೆ ಸದ್ಗತಿ ಆಗುವುದಿಲ್ಲ. ಅದಕ್ಕಾಗಿ ಮುನಿಗಳು ತಡೆದರು. ಪ್ರಧಾನ ದೇವತೆಗಳು ಪಾಂಡುರಾಜನ ಮಕ್ಕಳಾಗಿ ಹುಟ್ಟಬೇಕಿತ್ತು. ಇದು ಭಗವಂತನ ಸಂಕಲ್ಪ.ಅದರ ವಿನಃ ಪಾಂಡುರಾಜನಿಗೆ ಸದ್ಗತಿ ಆಗುವುದಿಲ್ಲ ಹೀಗಾಗಿ ಮುನಿಗಳು ಅವನನ್ನು ತಡೆದರು.
ಮಕ್ಕಳಿಲ್ಲದವರಿಗೆ ಸದ್ಗತಿ ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಉ್ದಭವಿಸುವುದು ಸಹಜ.
ಮಕ್ಕಳಿಲ್ಲದಿದ್ದರೂ ಮಾನವರು ಅನ್ಯ ಮಾರ್ಗಗಳಿಂದ ಸದ್ಗತಿ ಪಡೆಯಬಹುದು. ಸಂಧ್ಯಾವಳಿಯ ಮಗನಾದ ಧರ್ಮಭೂಷಣ ಸದ್ಗತಿ ಪಡೆದ ಉದಾರಣೆ ಮಹಾಭಾರತ ನಿರೂಪಿಸುತ್ತದೆ.
ಸಂಧ್ಯಾವಳಿಯ ರಾಜನು ರುಕ್ಮಾಂಗದನು. ಅವನು ಮಹಾ ಧರ್ಮಿಷ್ಠನು. ಏಕಾದಶಿ ವ್ರತದಲ್ಲಿ ಬಹಳ ನಿಷ್ಠೆಯುಳ್ಳವನು. ಅವನಂತೆ ಅವನ ಪತ್ನಿ, ಪುತ್ರನು ಕೂಡ ಧರ್ಮಿಷ್ಢರಾಗಿದ್ದರು. ಆತನ ಪರೀಕ್ಷೆಗಾಗಿಯೇ ಪರಮಾತ್ಮನು ಬೇರೊಂದು ರೂಪದಲ್ಲಿ ಬಂದು ನೀನು ಏಕಾದಶಿ ವ್ರತವನ್ನು ಬಿಡಬೇಕು. ಇಲ್ಲವೇ ನಿನ್ನ ಮಗ ಧರ್ಮಾಂಗನ ತಲೆ ಕತ್ತರಿಸಿಕೊಡಬೇಕು ಎಂದು ಕೇಳುತ್ತಾನೆ. ರುಕ್ಮಾಂಗನು ಏನೂ ತೋಚದೇ ಸುಮ್ಮನಿದ್ದನು. ಅದನ್ನು ಕಂಡು ಆತನ ಮಗ ಧರ್ಮಾಂಗನು ಮುಂದೆ ಬಂದು ನೀನು ವ್ರತವನ್ನು ಬಿಡಬೇಡ ಧರ್ಮ ಪಾಲನಿಗೆ ನಾನು ನನ್ನ ಶಿರವನ್ನು ಕತ್ತರಿಸಿ ಕೊಡಲು ಸಿದ್ಧನಿರುವೆ ಎಂದು ಹೇಳಿದನು. ಅವರ ಭಕ್ತಿ , ಶ್ರದ್ಧೆ, ಪ್ರಾಮಾಣಿಕತೆಗೆ ಮೆಚ್ಚಿ ಮೂವರಿಗೂ ಭಗವಂತ ಸದ್ಗತಿಯನ್ನು ನೀಡಿದನು. ಕಲಿಯುಗದಲ್ಲಿ ಮಕ್ಕಳಿಲ್ಲದಿದ್ದರೂ ಧರ್ಮವನ್ನು ನಿಷ್ಠೆಯಿಂದ ಆಚರಿಸಿದರೆ ಪರಮಾತ್ಮನು ಸದ್ಗತಿ ನೀಡುತ್ತಾನೆ. ನವವಿಧ ಭಕ್ತಿಗಳಲ್ಲಿ ಆತ್ಮಾರ್ಪಣೆ ಶ್ರೇಷ್ಠವಾದ ಭಕ್ತಿ. ಧರ್ಮಾಂಗನು ದೇಹದ ಮೇಲಿನ ವ್ಯಾಮೋಹ ಬಿಟ್ಟು ಭಗವಂತನಿಗೆ ತನ್ನನ್ನೆ ಅರ್ಪಣೆ ಮಾಡಿಕೊಳ್ಳಲು ಸಿದ್ದನಾಗಿದ್ದ ಅದಕ್ಕಾಗಿ ಪರಮಾತ್ಮ ಸದ್ಗತಿ ನೀಡಿದ. ಅದೇ ಕಾಲದಲ್ಲಿ ಕಲಿ, ಇಂದ್ರಜಿತು, ಮೊದಲಾದ ರಾಕ್ಷಸರು ವಿಚಿತ್ರವೀರ್ಯನ ಮಗನಾದ ದೃತರಾಷ್ಟ್ರನ ಪತ್ನಿಯ ಗರ್ಭದಲ್ಲಿ ಪ್ರವೇಶಿಸಿದರು.
ತನ್ನ ಸಹೋದರನ ಪತ್ನಿ ಗಾಂಧಾರಿ ಗರ್ಭಿಣಿಯಾದ ವಿಷಯ ಮುನಿಯಿಂದ ತಿಳಿದ ಪಾಂಡು ರಾಜನು ಕುಂತಿಯನ್ನು ಕರೆದು ನನಗಿಂತ ಗುಣದಲ್ಲಿ ಅದೀಕರಾಗಿರುವರಿಂದ ಮಕ್ಕಳನ್ನು ಪಡೆ ಎಂದು ಹೇಳುತ್ತಾನೆ. ಬಹಳ ದುಃಖ ದಿಂದ ಕುಂತಿಯು ನನ್ನ ಬಳಿ ದೇವತೆಗಳನ್ನು ಪ್ರಾರ್ಥಿಸಿ ಉತ್ತಮ ಮಕ್ಕಳನ್ನು ಪಡೆಯುವ ಮಂತ್ರವಿದೆ ಎಂದು ಹೇಳುತ್ತಾಳೆ.ಪತಿಗೆ ಬಂದ ಶಾಪದಿಂದಾಗಿ ಕುಂತಿ ಒಪ್ಪಿಕೊಳ್ಳುತ್ತಾಳೆ.
ನಿಮಗಿಂತ ಗುಣದಲ್ಲಿ ಅದಿಕರಾದವರು ದೇವತೆಗಳ ಹೊರತು ಮತ್ತಾರಿಲ್ಲ. ಈಗ ನೀವೆ ಹೇಳಿ ಯಾವ ದೇವತೆಯನ್ನು ಆಹ್ವಾನಿಸಲಿ ಎಂದು ಕುಂತಿ ಪಾಂಡುರಾಜ ನನ್ನು ಕೇಳುತ್ತಾನೆ.
ಪಾಂಡು ರಾಜ ಏನು ಹೇಳಿದ ಎಂಬುದನ್ನು ನಾಳೆ ತಿಳಿದುಕೊಳ್ಳೋಣ.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ ( 9886465925 )
Subscribe , Follow on
Facebook Instagram YouTube Twitter X WhatsApp