-->

What is Gastritis , symptoms , reasons and solutions

 ★ ವ್ಯಾಖ್ಯಾನ:  ಜೀರ್ಣಕ್ರಿಯೆಯ ಯಾವುದೇ ರೀತಿಯ ಸಮಸ್ಯೆಗಳು ಜನ ಸಾಮಾನ್ಯರ ಭಾಷೆಯಲ್ಲಿ ಗ್ಯಾಸ್ಟ್ರಿಕ್‌ ಎಂದು ಆಗಿದೆ.

★ ಏನಿದು ಗ್ಯಾಸ್ಟ್ರೈಟಿಸ್:
ಜನರ ಆಡುಭಾಷೆಯ ಅರ್ಥವನ್ನೇ ತೆಗೆದುಕೊಂಡು ಹೇಳುವುದಾದರೆ, ಅದು ಅನ್ನನಾಳ, ಜಠರ, ಸಣ್ಣ ಕರುಳು, ದೊಡ್ಡ ಕರುಳುಗಳ ಊತವೇ ಆಗಿದೆ.
ವೈಜ್ಞಾನಿಕ ಭಾಷೆಯಲ್ಲಿ, ಯಾವ ಸ್ಥಾನದಲ್ಲಿ ಊತ ಉಂಟಾಗಿದೆ ಎನ್ನುವುದನ್ನು ಆಧರಿಸಿ ಈ ಜೀರ್ಣಕ್ರಿಯೆಯ ವಿಕೃತಿಯು ವಿಭಿನ್ನ ಲಕ್ಷಣಗಳನ್ನು ತೋರುತ್ತದೆ.

★ ಲಕ್ಷಣಗಳು:
ಅನ್ನನಾಳ ಊತ ಬಂದರೆ , ಗಂಟಲು ಒತ್ತುವುದು, ಎದೆಯುರಿ, ಗಂಟಲಿನಲ್ಲಿ ಸದಾ ಏನೋ ಒಂದು ವಸ್ತುವು ಇರುವಂತೆ ಭಾಸವಾಗುವುದು.

ಜಠರದಲ್ಲಿ ಊತ ಬಂದರೆ- ಎದೆಯುರಿ, ಹುಳಿತೇಗು ಬರುವುದು, ಏನು ತಿಂದರೂ ತೇಗುತ್ತಲೇ ಇರುವುದು, ಕೆಲವೊಮ್ಮೆ ವಾಂತಿ ಬರುವುದು ಈ ಲಕ್ಷಣಗಳು ಕಂಡುಬರುತ್ತವೆ.

ಡಿಯೋಡಿನಮ್ ನಲ್ಲಿ ಊತ ಬಂದರೆ-
ಆಹಾರ ಪಚನವಾಗದು, ಅಜೀರ್ಣ ತೇಗು, ಹೊಟ್ಟೆಭಾರ, ಹೊಟ್ಟೆಯುಬ್ಬರ ಬರುವುದು. ಒತ್ತಾಯಿಸಿ ಊಟ ಮಾಡಿದರೆ ಹೊಟ್ಟೆನೋವು ಬರುತ್ತದೆ.

ಸಣ್ಣ ಕರುಳಿನಲ್ಲಿ ಊತ ಬಂದರೆ-
ಹಸಿವೆಯಾಗದೇ ಇರುವುದು, ಇಡೀ ಹೊಟ್ಟೆ ಸಣ್ಣನೆ ನೋವು, ಸದಾ ಹೊಟ್ಟೆ ಭಾರ ಇರುವುದು.
ಶರೀರದ ಬೆಳವಣಿಗೆ ಕುಂಠಿತ ಅಥವಾ ದುರ್ಬಲಗೊಳ್ಳುವುದು.

★ ಇದೇಕೆ ನಮ್ಮ ಮೇಲೆ ದಾಳಿ ಮಾಡುತ್ತದೆ:
ಅಗ್ನಿ ಎಂದರೆ, ಜಠರ ಕರುಳುಗಳಲ್ಲಿ ಆಹಾರವನ್ನು "ಪಚನಮಾಡಿ", "ಹೀರಿಕೊಂಡು" ನಂತರ "ಆಹಾರವನ್ನೇ ಜೀವಕೋಶಗಳನ್ನಾಗಿ ಪರಿವರ್ತಿಸಿ" ಜೀವಿಯ ಪರಮ ಶ್ರೇಷ್ಠ ಶಕ್ತಿಯಾಗಿದೆ.




ಇದನ್ನು ಗಮನಿಸದೇ, ಹೆಚ್ಚು ಆಹಾರ, ಕಡಿಮೆ ಆಹಾರ, ಅಕಾಲದಲ್ಲಿ ಆಹಾರ ಸೇವನೆ, ನೀರಿನ ಅಂಶವಿಲ್ಲದ ಆಹಾರ ಸೇವನೆ, ಹದವಾಗಿ ಬೆರೆಸದ ಹುಳಿ, ಉಪ್ಪು ಖಾರಗಳ ಅಸಮರ್ಪಕ ಸೇವನೆ ಮಾಡಿದರೆ, ಮನೆಯಲ್ಲಿ ನಿತ್ಯವೂ ಎಣ್ಣೆ ತಿಂಡಿಗಳು, ಹುಳಿ ಬರಿಸಿದ ಹಿಟ್ಟಿನ ದೋಸೆ, ಇಡ್ಲಿಗಳ ಸೇವನೆ, ಆಹಾರವೇ ಅಲ್ಲದ ವಸ್ತುಗಳನ್ನು ಅಂದರೆ, ಎಲ್ಲಾ ರೀತಿಯ ಬೇಕರಿ, ಜಂಕ್ ತಿನಿಸುಗಳನ್ನು ತಿಂದರೆ ಅದು ಇಡೀ ಕರುಳನ್ನು ದುರ್ಬಲಗೊಳಿಸುತ್ತದೆ. ಇದು ಮುಂದೊಮ್ಮೆ ಅಪಾಯಕಾರಿ ಹಂತವನ್ನು ತಲುಪುತ್ತದೆ.

ಹಾಗೆಯೇ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಜೀವನದಲ್ಲಿ ಹೆಚ್ಚು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದರೆ.

★ತಪ್ಪಾದ ಚಿಕಿತ್ಸಾ ವಿಧಾನ:
ಮೇಲಿನ ಯಾವ ಲಕ್ಷಣ ಬಂದರೂ, ದೊಡ್ಡ‌ದೊಡ್ಡ‌ ವೈದ್ಯರೂ ಕೇವಲ ಆ್ಯಂಟಾಸಿಡ್ ಮಾತ್ರೆ, ಉದರ ಶೂಲನಾಶಕ ಮಾತ್ರೆ ಕೊಡುವುದರಿಂದ ಲಕ್ಷಣಗಳು ನಿಲ್ಲಬಹುದು, ಆದರೆ ಗ್ಯಾಸ್ಟ್ರಿಕ್‌ ಎಂಬ ರೋಗವು ಮತ್ತಷ್ಟು ಆಳದ ಬೇರೆ ರೋಗವಾಗಿ ಬದಲಾಗಿ ಬೆಳೆಯುತ್ತಿರುತ್ತದೆ.

ಹಾಗೆಯೇ, ಔಷಧಿ ಅಂಗಡಿಯಲ್ಲಿ ಸಿಗುವ ಗ್ಯಾಸ್ಟ್ರಿಕ್‌ ಮಾತ್ರೆಗಳಾದ Ranitidine , Omeprezol , Pantaprazol , Esmoprazol , Dompheridone , Ondencitron etc ಮುಂತಾದವುಗಳನ್ನು ಸೇವಿಸಿ, ಲಕ್ಷಣಗಳನ್ನು ಮರೆಮಾಚಿ ನಿತ್ಯವೂ ಅದೇ ಅಪಥ್ಯಗಳನ್ನು ಮುಂದುವರಿಸಿ ನಾನು ಗ್ಯಾಸ್ಟ್ರಿಕ್‌ ತೊಂದರೆಯಿಂದ ಬಳಲುತ್ತಿಲ್ಲ ಎಂದು ನಂಬುವುದು ಅತ್ಯಂತ ಅಪಾಯಕಾರಿಯಾಗಿದೆ.

★ ರೋಗ ಮತ್ತು ಚಿಕಿತ್ಸಾಯ ಬಗ್ಗೆ ಸಂಕ್ಷಿಪ್ತ ಮಾಹಿತಿ:
ಅಗ್ನಿ ಎಂಬ ಅತ್ಯಂತ ಶ್ರೇಷ್ಠ ಸಿದ್ಧಾಂತ ಆಯುರ್ವೇದದಲ್ಲಿ ಇದೆ. ಇಡೀ ಸೃಷ್ಟಿಯ ರಚನೆ, ಸ್ಥಿತಿ ಮತ್ತು ಲಯಗಳು ನಿಂತಿರುವುದೇ ಈ "ಅಗ್ನಿ" ತತ್ವದ ಮೇಲೆ. ಹಾಗಾಗಿ, ಸೂರ್ಯನು ಎಲ್ಲಾ ಜೀವಿಗಳಿಗೆ, ಎಲ್ಲಾ ಭಾಗದ ಮನುಷ್ಯರಿಗೆ, ಎಲ್ಲಾ ಧರ್ಮೀಯರಿಗೆ ದೇವರಾಗಿದ್ದಾನೆ. ಈ ಅಗ್ನಿಯೇ ಇನ್ನೊಂದು ರೂಪ ಪಡೆದು ಗಿಡ ಮರಗಳಾಗಿದೆ, ಕ್ರಿಮಿ, ಕೀಟಗಳಾಗಿದೆ, ಮನುಷ್ಯ ಶರೀರವೂ ಆಗಿದೆ. ನಮ್ಮ ಶರೀರದಲ್ಲಿ ಒಟ್ಟು 13 ರೀತಿಯ ಅಗ್ನಿಗಳಿವೆ, ಅವು ಆಹಾರ ಜೀರ್ಣ, ಹೀರುವಿಕೆ, ಪರಿವರ್ತಿಸುವಿಕೆ ಕಾರ್ಯಗಳನ್ನು ಮಾಡುತ್ತವೆ. ಈ ಎಲ್ಲಾ ಅಗ್ನಿಗಳಿಗೆ "ಜ್ವರಾದಿ ಅಧ್ಯಾಯೋಕ್ತೈಃ ಪಾಚನೈಃ" ಎಂದು ಅಗ್ನಿಗೆ ಸಹಕಾರ ಕೊಟ್ಟು 'ಸರ್ವ ರೋಗಕಾರಕ ರಾಸಾಯನಿಕ ವಸ್ತುಗಳನ್ನು" ಕರಗಿಸುವ ಮತ್ತು ಆ ಸ್ಥಾನದಲ್ಲಿ ಶುದ್ಧ ಧಾತುಗಳನ್ನು(ಜೀವಕೋಶಗಳನ್ನು) ತುಂಬುವ ಕೆಲಸ ಮಾಡುತ್ತದೆ.

★ ಆಯುರ್ವೇದವೇ ಯಾಕೆ:
ಆಯುರ್ವೇದದಲ್ಲಿ ಮೂಲ ಅಗ್ನಿಯನ್ನೇ ಚಿಕಿತ್ಸೆ ಮಾಡುವುದರಿಂದ ಕೇವಲ ಗ್ಯಾಸ್ಟ್ರಿಕ್‌ ಮಾತ್ರ ಅಲ್ಲ, ಅದನ್ನು ಆಧರಿಸಿ ಮುಂಬರುವ ನೂರಾರು ಭಯಾನಕ ರೋಗಗಳನ್ನು ಆರಂಭದಲ್ಲೇ ತಡೆಯುವುದರಿಂದ, ಮನುಷ್ಯ ತನ್ನ ಜೀವಿತಾವಧಿಯ ಉದ್ದಕ್ಕೂ ಆರೋಗ್ಯ ಮತ್ತು ಆನಂದದಿಂದ ಬಾಳಬಹುದು.

★ ಅನುವಂಶೀಯ ಸಂಬಂಧ:
ಗ್ಯಾಸ್ಟ್ರಿಕ್‌ ಎಂಬುದು, ನಮ್ಮ ಆಹಾರ ಮತ್ತು ಜೀವನ ಶೈಲಿಯ ವಿಕೃತಿಯಿಂದ ಆಗುವ ಕಾರಣ ಅನುವಂಶೀಯ  ಸಿದ್ಧಾಂತ ನಂಬುವುದು ಸೂಕ್ತವಲ್ಲ.ನಿಮ್ಮ ಮನಸ್ಸಿನ ಆತಂಕವು ರೋಗವನ್ನು ಮತ್ತಷ್ಟೂ ಹೆಚ್ಚಿಸುತ್ತದೆ

★ ಚಿಕಿತ್ಸಾ ಕಾಲಾವಧಿ:
45-120 ದಿನಗಳ ಔಷಧಿ ಚಿಕಿತ್ಸೆಯಿಂದ ಪೂರ್ಣ ಪರಿಹಾರ ಸಾಧ್ಯ. ಹಾಗೆಯೇ, ಒಂದು ವರ್ಷ ನಿಯಮಿತ ಆಹಾರ ಪಾಲನೆ ಮಾಡಿದರೆ, ಗ್ಯಾಸ್ಟ್ರಿಕ್‌ ಮಾತ್ರವಲ್ಲದೇ, ಅದಕ್ಕೆ ಸಂಬಂಧಿಸಿದ ಅನೇಕ ರೋಗಗಳು ಇದ್ದವೋ ಇಲ್ಲವೋ ಎಂಬಂತೆ ಮರೆತುಹೋಗುತ್ತವೆ.

★ ಶಾಶ್ವತ ಪರಿಹಾರ:
ಆಹಾರ ಪಾಲನೆ ಮತ್ತು ಆತಂಕ ರಹಿತ ಆನಂದಮಯ ಜೀವನವೇ ಶಾಶ್ವತ ಪರಿಹಾರವಾಗಿದೆ.

–>