* ಕಡಿಮೆ ಶಿಕ್ಷಣವಿದೆ - ಬೇಡಾ
* ಸಂಬಳ ಕಡಿಮೆ ಇದೆ -ಬೇಡಾ
* ಹಳ್ಳಿಯಲ್ಲಿ ಇದ್ದೇವೆ - ಬೇಡಾ
* ಸ್ವಂತ ಮನೆಯಿಲ್ಲ - ಬೇಡಾ
* ಮನೆಯಲ್ಲಿ ಅತ್ತೆ - ಮಾವ ಇದ್ದಾರೆ - ಬೇಡಾ
* ಹೊಲ ಇಲ್ಲ - ಬೇಡಾ
* ಹೊಲದ ಕೆಲಸ ಮಾಡುತ್ತೇವೆ - ಬೇಡಾ
* ಉದ್ಯೋಗ ಮಾಡುತ್ತೇವೆ - ಬೇಡಾ
* ಬಹಳ ದೂರವಿರುತ್ತೇವೆ - ಬೇಡಾ
* ಕಪ್ಪಗಿದ್ದಾನೆ - ಬೇಡಾ
* ತಲೆಯಲ್ಲಿ ಕೂದಲಿಲ್ಲ - ಬೇಡಾ
* ಗಿಡ್ಡವಾಗಿದ್ದಾನೆ - ಬೇಡಾ
* ಬಹಳ ಎತ್ತರವಿದ್ದಾನೆ - ಬೇಡಾ
* ಚಸ್ಮಾ ಇದೆ - ಬೇಡಾ
* ವಯಸ್ಸಿನಲ್ಲಿ ಬಹಳ ಅಂತರವಿದೆ - ಬೇಡಾ
* ಅವನು ಎಲ್ಲಿ ಇರುತ್ತಾನೋ ಆ ಜಾಗ ಸರಿಯಿಲ್ಲ - ಬೇಡಾ
* ಏಕ ನಾಡಿ ಇದೆ - ಬೇಡಾ
* ಮಂಗಳ ವಿದೆ - ಬೇಡಾ
* ನಕ್ಷತ್ರ ದೋಷವಿದೆ - ಬೇಡಾ
* ಮೈತ್ರಿ ದೋಷವಿದೆ - ಬೇಡಾ
*ಎಲ್ಲಾ ವಿಷಯದಲ್ಲೂ ಬೇಡವೆಂದು ಕೂತರೆ ಮದುವೆಯಾಗುವದು ಯಾವಾಗ*
* ಸoಸಾರ ಯಾರ ಜೊತೆಗೆ ಮಾಡುತ್ತೀರಾ ?
* ತಂದೆ / ತಾಯಿ ಯಾವಾಗ ಆಗುತ್ತಿರಿ ?
* ಅತ್ತೆ / ಮಾವ ಯಾವಾಗ ಆಗುತ್ತಿರಿ ?
* ಅಜ್ಜ / ಅಜ್ಜಿ ಯಾವಾಗ ಆಗುತ್ತಿರಿ ?
* ಆಯ್ತು ಇಷ್ಟೆಲ್ಲ ಕಾರಣ ಹುಡುಗನಿಗಾಗಿ ಕೊಡುತ್ತಿರುವಾಗ ಹುಡುಗಿಯ ಹತ್ತಿರ ಇರುವ ಯಾವುದಾದರೂ ಇಂತಹ ವಿಶಿಷ್ಟ ಗುಣಗಳ ಬಗ್ಗೆ ತಂದೆ/ ತಾಯಂದಿರು ಹೇಳುತ್ತಾರಾ ?
* ಬಹಳಷ್ಟು ಹುಡುಗಿಯರಿಗೆ ಸoಸಾರ ಹೇಗೆ ಮಾಡುವುದೆಂದರೆ ಗೊತ್ತಿರುವದಿಲ್ಲ. ಹೇಗೆ ಹೊಂದಿಕೊಂಡು ಹೋಗಬೇಕು ಎಂದು ಗೊತ್ತಿರುವದಿಲ್ಲ. ಕೆಲವು ಹುಡುಗಿಯರಿಗೆ ದಿನನಿತ್ಯದ ಅಡುಗೆ ಮಾಡಲು ಬರುವುದಿಲ್ಲ.
ಗೊತ್ತಿದೆ ಹುಡುಗಿಯರು ಈಗ ಸಬಲರಾಗಿದ್ದಾರೆ. ಹುಷಾರಾಗಿದ್ದಾರೆ. ಕಲಿತವರಿದ್ದಾರೆ. ತಮ್ಮ ಸ್ವಂತ ಕಾಲಮೇಲೆ ನಿಲ್ಲುವವರಿದ್ದಾರೆ ಎಂದು ತಾವು ಅವರಿಗಿಂತ ಹುಷಾರ ಇರುವ ಅಳಿಯ ಹೆಚ್ಚು ಸಂಬಳ ಮತ್ತು ಅವರ ಆಸ್ತಿಯ ಅಪೇಕ್ಷೆ ಇಡುತ್ತೀರಿ.
ಆದರೆ ಆ ಅಪೇಕ್ಷೇಗಳು ಪೂರ್ತಿಯಾಗುವದಿಲ್ಲವೆಂದು ಸಣ್ಣ ಪುಟ್ಟ ಕಾರಣ ನೀಡಿ ಬೇಡಾ ಅನ್ನುತ್ತ ಹೋಗುತ್ತೀರಿ. ಅಲ್ಲಿ ಹುಡುಗಿಯರ ವಯಸ್ಸು ಬೆಳೆಯುತ್ತಾ ಹೋಗುತ್ತದೆ.
ಆದ್ದರಿಂದ ಕಡಿಮೆ ಸಂಬಳವಿದ್ದರೂ ಒಳ್ಳೆಯ ಮನಸ್ಸಿನ ಮತ್ತು ಯಾವುದೇ ವ್ಯಸನವಿಲ್ಲದ ಅವರಿಗೆ ಮನಸ್ಸಿನಿಂದ ಜೋಡಿಯಾಗುವ ಬಯಕೆ ಇರುತ್ತದೆ. ಆದರೆ ಹುಡುಗಿಯರ ತಂದೆ, ತಾಯoದಿರ ಮತ್ತು ಅವರ ಸಂಬಂಧಿಗಳ well settle ವಾಖ್ಯಾನದಲ್ಲಿ ಕೂಡುವದಿಲ್ಲ. ಕಾರಣ ಅವರು ಹಿಂದೆ ಉಳಿಯುತ್ತಾರೆ, ಹುಡುಗನ ಮದುವೆ ವೇಳೆಯಲ್ಲಿ ಇರುವ ಸಂಬಳದ ಮೇಲೆ ಹುಡುಗಿಯರ ಹಿತಚಿಂತನೆ ಮಾಡುವುದರ ಬದಲು ಆ ಹುಡುಗನ ಮೇಲೆ ವಿಶ್ವಾಸವಿಟ್ಟು ಮದುವೆ ಮಾಡಿಕೊಡುವುದು ಅಗತ್ಯ ವಾಗಿದೆ, ಕಾರಣ ಈಗಿರುವ ಸಂಬಳ ಅವರ ಮುಂದಿನ ಭವಿಷ್ಯದಲ್ಲಿಯು ಇರುವುದಿಲ್ಲ. ಪ್ರತಿ ವರ್ಷವೂ ಅವರ ಸಂಬಳ ಏರಿಕೆ ಯಾಗುತ್ತದೆ ಮತ್ತು ಮದುವೆಯಾದ ಮೇಲೆ ಆ ಹುಡುಗರಿಗೆ ಅವರ ಕನಸು ಪೂರ್ತಿಗೊಳಿಸುವ ಹೊಸ ಉತ್ಸಾಹ ,ಹುರುಪು ಇರುತ್ತದೆ ಮತ್ತು ಸಂಬಳ ಹೆಚ್ಚಿಗೆಯಾದ ಮೇಲೆ ಹುಡುಗಿಯರು ಸುಖವಾಗಿರುತ್ತಾರೆ ಎನ್ನುವದು ಅವರ ತಪ್ಪುತಿಳುವಳಿಕೆ ಯಾಗಿರುತ್ತದೆ. ಭವಿಷ್ಯದಲ್ಲಿ ಏನಾಗುತ್ತದೋ ಅದು ಯಾರಿಗೂ ಗೊತ್ತಿರುವುದಿಲ್ಲ. ಯಾವಾಗ ಏನಾಗುತ್ತದೋ ಗೊತ್ತಾಗುವದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮದುವೆ ಎಂದರೆ ಅವರ ತಂದೆ ತಾಯಂದಿರಿಗೆ ಮತ್ತು ಅವರ ಸಂಬಂಧಿಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ
ನಮ್ಮ ಅಳಿಯ ಡಾಕ್ಟರ, ನಮ್ಮ ಅಳಿಯ ಇಂಜಿನಿಯರ ,MBA, CA, MCA, ಅಂತ ಹೇಳುತ್ತ ಇಷ್ಟು ಲಕ್ಷದ ಪ್ಯಾಕೇಜ್ ಇದೆ ಎಂದು ಹೇಳುವುದು ಪಾಲಕರ ದೊಡ್ಡಸ್ತಿಕೆಯಾಗುತ್ತದೆ. ಈ ರೀತಿಯಾಗಿ ಪ್ರತಿ ಹುಡುಗಿ, ಹುಡುಗಿಯರ ತಂದೆ, ತಾಯಂದಿರ ಮತ್ತು ಅವರ ಸಂಬಂಧಿಕರ ಪ್ರಯತ್ನವಾಗಿರುತ್ತದೆ. ಆದರೆ ಪ್ರತಿಯೊಬ್ಬರು ಈ ರೀತಿಯ ಪ್ರಯತ್ನದಲ್ಲಿದ್ದರೆ ಸಣ್ಣಪುಟ್ಟ ಕೆಲಸದಲ್ಲಿರುವ ಹುಡುಗರು ಮಾಡುವದೇನು? ಆ ಹುಡುಗರ ಮದುವೆ ಆಗುವ ವರೆಗೆ ಇದು ಒಂದು ಪ್ರಶ್ನೆಯೇ ಆಗಿದೆ. ಯಾವಾಗ ಮದುವೆಯಲ್ಲಿ ಮನುಷ್ಯನಿಗಿಂತ ಶಿಕ್ಷಣ , ಹಣ ,ಆಸ್ತಿ, ಇವುಗಳಿಗೆ ಹೆಚ್ಚಿನ ಒಲವು ಬಂತು ಅವಾಗಿನಿಂದ ಗಂಡ , ಹೆಂಡತಿಯಲ್ಲಿ ಜಗಳ ಹಾಗೂ ಘಟಸ್ಪೋಟದ ಪ್ರಮಾಣಗಳು ಹೆಚ್ಚಿಗೆಯಾಗುತ್ತಿವೆ. ಈ ಸತ್ಯ ಮರೆತು ನಡೆಯುವದಿಲ್ಲ.
ಮದುವೆಯಲ್ಲಿ ಭೌತಿಕ ಸುಖಕ್ಕಿಂತ ಮಾನಸಿಕ ಸುಖದ, ಆಧಾರದ ತಿಳುವಳಿಕೆ ಅವಶ್ಯವಾಗಿದೆ.
ಮುಂದಿನ ಜನ್ಮದಲ್ಲಿ ಜನ್ಮ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ , ಸ್ವರ್ಗದಿಂದ ದೇವರು ತಥಾಸ್ತು ಅನ್ನುತ್ತಿರುತ್ತಾನೆ. ಮತ್ತು ನಾವು ಎಲ್ಲಾ ವಿಷಯಗಳನ್ನು ನಕಾರಾತ್ಮಕವಾಗಿಟ್ಟು ಈ ಜನ್ಮದ ಅರ್ಥವನ್ನೇ ಮುಗಿಸಿಬಿಡುತ್ತೇವೆ.
ತಂದೆ ತಾಯಿಗಳು ತಮ್ಮ ಮಗ / ಮಗಳ ಸುಖದ ವಿಚಾರ ಅವಶ್ಯಕವಾಗಿ ಮಾಡಲೇಬೇಕು,
ಆದರೆ ಅದನ್ನು ಮಾಡುವಾಗ ಅವರ ವಯಸ್ಸು ಹೆಚ್ಚಿಗೆ ಯಾಗುತ್ತಿರುವದರ ಬಗ್ಗೆ ಮತ್ತು ಕಳೆದು ಹೋಗುತ್ತಿರುವ ಸಮಯದ ಬಗ್ಗೆಯೂ ವಿಚಾರ ಮಾಡಬೇಕು. ಎಲ್ಲಾದರೂ ನಿಲ್ಲಬೇಕು ಮತ್ತು ಅಪೇಕ್ಷೆಗಳನ್ನು ತಡೆದು ಹೊಂದಿಕೊಳ್ಳುವ ವಿಚಾರ ಮಾಡಿ ತಕ್ಷಣ ಮುಂದೆ ಹೋಗುವಂತೆ ಮಾಡಬೇಕು. ಯಾಕೆಂದರೆ ಅಪೇಕ್ಷೆಗಳು ಎಂದೂ ಮುಗಿಯುವುದಿಲ್ಲ.
*ಎಲ್ಲ ತಂದೆ / ತಾಯಂದಿರು ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುನ್ನಡೆಯಿರಿ*
Subscribe , Follow on
Facebook Instagram YouTube Twitter X WhatsApp