-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 14

 ನಾನು ಪಡೆದ ಯಶಸ್ಸಿನ ಆದರಿಸಿ ನನ್ನ ಬಗ್ಗೆ ನಿರ್ಣಯಕ್ಕೆ ಬರಬೇಡಿ. ನಾನು ಎಷ್ಟು ಬಾರಿ ಕೆಳಗೆ ಬಿದ್ದೆ ಮತ್ತು ಅದನ್ನು ಹಿಮ್ಮೆಟ್ಟಿ ಎದ್ದು ನಿಂತೆ ಎಂಬುದನ್ನು ಆದರಿಸಿ ನನ್ನ ಬಗ್ಗೆ ನಿರ್ಣಾಯಕ್ಕೆ ಬನ್ನಿ - ನೆಲ್ಸನ್ ಮಂಡೇಲಾ 

Don't judge me based on my success. Judge me by how many times I fell down and got back up - Nelson Mandela

*********

ಹಿಂಸಾಚಾರದಿಂದ ನೀವು ಒಂದು ಸಮಸ್ಯೆಯನ್ನು ಬಗೆಹರಿಸಿರಬಹುದು , ಆದರೆ ಅದರಿಂದ ಇನ್ನಷ್ಟು ಸಮಸ್ಯೆಗಳಿಗೆ ಬೀಜ ಬಿತ್ತಿರುತ್ತೀರಿ - ದಲೈ ಲಾಮಾ 

With violence you may have solved one problem, but with it you have sown the seeds for more problems - Dalai Lama

*********

ದುರುದ್ದೇಶದಿಂದ ಹೇಳಿದ ಸತ್ಯವು ಸಾವಿರ ಸುಳ್ಳಿಗೆ ಸಮಾನ - ವಿಲಿಯಂ ಬ್ಲೇಕ್

A truth spoken in malice is worth a thousand lies - William Blake

*********

ನಮ್ಮ ಅಜ್ಞಾನದ ಮಿತಿಯನ್ನು ತಿಳಿದುಕೊಳ್ಳುವುದೇ  ನಿಜವಾದ ಜ್ಞಾನ - ಕನ್ಫ್ಯೂಷಿಯಸ್ 

Real knowledge is knowing the limits of our ignorance - Confucius

*********

ಆತ್ಮವಿಶ್ವಾಸವು ಜಯದ ಮೊದಲ ಗುಟ್ಟು - ರಾಲ್ಫ್ ವಾಲ್ಡೊ ಎಮರ್ಸನ್ 

Confidence is the first secret of success - Ralph Waldo Emerson

*********

ಜ್ಞಾನದ ಏಕೈಕ ಉದ್ದೇಶವೇನೆಂದರೆ ಮನಸ್ಸಿಗೆ ಶಕ್ತಿ ಕೊಡುವುದು ಮತ್ತು ಅದನ್ನು ಶಿಸ್ತಿಗೆ ಒಳಪಡಿಸುವುದು - ಸ್ವಾಮಿ ವಿವೇಕಾನಂದ 

The only purpose of knowledge is to empower the mind and discipline it - Swami Vivekananda

*********

ಮನಸ್ಸಿನಲ್ಲಿರುವ ಪ್ರತ್ಯೇಕತೆಯ ಗೋಡೆಗಳ್ಳನ್ನು ಒಡೆದರೆ ಮಾತ್ರ ಹೃದಯಾಳದಿಂದ ಕ್ಷಮಿಸಲು ಸಾಧ್ಯ - ದೀಪಕ್ ಚೋಪ್ರಾ 

Only by breaking down the walls of separation in the mind can one forgive from the heart - Deepak Chopra

*********

ನಮ್ಮ ಅಂತರಂಗ ಪುಸ್ತಕ ತೆರೆಯುವ ತನಕ ಉಳಿದ್ದೆಲ್ಲಾ ಪುಸ್ತಕಗಳು ನಿಷ್ಪ್ರಯೋಜಕ - ಸ್ವಾಮಿ ವಿವೇಕಾನಂದ 

All books are worthless until our innermost book is opened - Swami Vivekananda

*********

Kannada subhashitha - ಕನ್ನಡ ಸುಭಾಷಿತ ಸಂಗ್ರಹ 14

 

ಎಲ್ಲವನ್ನು ಕಳೆದುಕೊಂಡಾಗ ಭರವಸೆ ಮಾತ್ರ ನಮ್ಮ ಬಲಿಷ್ಠ ಆಯುಧ ಎಂದು ನೆನಪಿಡಿ - ನೆಲ್ಸನ್ ಮಂಡೇಲಾ 

Remember hope is our strongest weapon when all is lost - Nelson Mandela

*********

ಸ್ವಾತಂತ್ರವು ದುಡಿಯುವ ಮನುಶ್ಯನ ಬೇಡುತ್ತದೆ , ದುಡಿಯದ ಮನುಷ್ಯನಿಗೆ ಸ್ವಾತಂತ್ರ ಇಲ್ಲ - ಹಾ.ಮಾ . ನಾಯ್ಕ್ 

Freedom demands a working man, a non-working man has no freedom - H.M. Naik

*********

ಜನರಿಗೆ ಹಿರಿಯರಿಂದ ಬರುವ ಆಭರಣಗಳ್ಳಲ್ಲಿ ಭಾಷೆಯು ಒಂದು , ಅದು ಚೆನ್ನಾಗಿದ್ದರೆ ಭೂಷಣ - ಬಿ .ಎಂ . ಶ್ರೀ 

Language is one of the jewels that come from the elders to the people, if it is good it is an ornament - B.M. Mr

*********

ನಾವು ಯಾವ ರೀತಿ ಬದುಕುವುದಿಲ್ಲವೋ ಅದೇ ರೀತಿ ಬೇರೆಯವರು ಬದುಕಲಿ ಎಂದು ಸಲಹೆ ಕೊಡಲು ನಮಗೆ ಅಧಿಕಾರವಿಲ್ಲ - ಪೂರ್ಣಚಂದ್ರ ತೇಜಸ್ವಿ 

We have no right to advise others to live the way we do not live - Poorchandra Tejaswi

–>