-->

ದೀಪಾವಳಿ 5 ದಿನದ ಆಚರಣೆ , Deepawali 5 days celebration

ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಮಾಸದ  ಕೃಷ್ಣ ತ್ರಯೋದಶಿ ದಿನ ಧನ ತ್ರಯೋದಶಿ, ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ ದಿನ ನರಕ ಚತುರ್ದಶಿ, ಅಮಾವಾಸ್ಯೆಯ ದಿನ ಧನಲಕ್ಷ್ಮೀ ಪೂಜೆ ಮತ್ತು ಕಾರ್ತಿಕ ಮಾಸದ ಶುಕ್ಲ ಪಾಡ್ಯಮಿಯ ದಿನ ಬಲಿಪಾಡ್ಯಮಿ ಹಬ್ಬದ ಆಚರಣೆ ನಡೆಯುತ್ತದೆ.  ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸೋದರ ಬಿದಿಗೆ ಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ. ‌  ‌5 ದಿನಗಳ ಸಂಭ್ರಮದ ದೀಪಾವಳಿಯು ಜಗತ್ತಿನಾದ್ಯಂತ ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದ್ದು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಮತ್ತು ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಪ್ರತಿನಿಧಿಸುತ್ತದೆ. ಇದು ಸಂತೋಷ ಮತ್ತು ಸಾಮರಸ್ಯವನ್ನು ಸೂಚಿಸುವ ಅತ್ಯಂತ ಮಹತ್ವದ ಹಬ್ಬವಾಗಿದೆ.

ದೀಪಾವಳಿ 5 ದಿನದ ಆಚರಣೆ , Deepawali 5 days celebration


ಐದು ದಿನದ ಹಬ್ಬಕ್ಕೆ ಒಂದು ವಾರದ ಮುಂಚಿತವಾಗಿ ಆಚರಣೆಯ ಸಿದ್ಧತೆಗಳು ನಡೆಯುತ್ತವೆ. ಮನೆ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಜನ ಹಬ್ಬದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಹಬ್ಬದ ಸಮಯದಲ್ಲಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ದೀಪಗಳು, ಹೂವುಗಳು, ರಂಗೋಲಿ ಮತ್ತು ಮೇಣದಬತ್ತಿಗಳಿಂದ ತಮ್ಮ ಮನೆ, ಕಚೇರಿ ಹಾಗೂ ಅಂಗಡಿಗಳನ್ನೂ ಅಲಂಕರಿಸುತ್ತಾರೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಜನರು ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

ದೀಪಾವಳಿ ಪ್ರಾರಂಭ ಮತ್ತು ಅಂತಿಮ ದಿನಾಂಕಗಳು ದೀಪಾವಳಿಯ 5 ದಿನದ ಹಬ್ಬವು ಧನ ತ್ರಯೋದಶಿ (ಧನ್ ತೆರಸ್) ಪ್ರಾರಂಭವಾಗುತ್ತದೆ ಮತ್ತು ಸೋದರ ಬಿದಿಗೆ (ಭಯ್ಯಾ ದೂಜ್‌) ನೊಂದಿಗೆ ಮುಕ್ತಾಯಗೊಳ್ಳುತ್ತದೆ.  


ದೀಪಾವಳಿ ದಿನ 1

ಧನ ತ್ರಯೋದಶಿ, ನೀರು ತುಂಬುವ ಹಬ್ಬ ಹಾಗೂ ನರಕ ಚತುರ್ದಶೀ ಅಭ್ಯಂಜನ ಆಚರಣೆಗಳೊಂದಿಗೆ ಪ್ರಾರಂಭವಾಗುತ್ತದೆ.

ದೀಪಾವಳಿ ದಿನ 2

ದೀಪಾವಳಿಯ ಎರಡನೇ ದಿನ ಚತುರ್ದಶಿ ತಿಥಿ ಇರುತ್ತದೆ. ಈ ದಿನವನ್ನು ನರಕ ಚತುರ್ದಶೀ, ಧನಲಕ್ಷ್ಮೀ ಪೂಜೆ ಮತ್ತು ಕೇದಾರೇಶ್ವರ ವ್ರತ  ಇವುಗಳನ್ನು ಆಚರಿಸಲಾಗುತ್ತದೆ.

ದೀಪಾವಳಿ ದಿನ 3

ದೀಪಾವಳಿಯ ಮೂರನೇ ದಿನ ಅಮಾವಾಸ್ಯೆ ತಿಥಿ ಜಾರಿಯಲ್ಲಿರುತ್ತದೆ. ಈ ದಿನ ಜನರು ದೀಪಾವಳಿಯನ್ನು ಆಚರಿಸುತ್ತಾರೆ. ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ, ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಗುರುತಿಸಲು ಜನ ತಮ್ಮ ಮನೆಗಳನ್ನು ದೀಪಗಳಿಂದ ಬೆಳಗಿಸುತ್ತಾರೆ. ಈ ವರ್ಷ ಇದೇ ದಿನ ಕೇತುಗ್ರಸ್ತ ಸೂರ್ಯಗ್ರಹಣ ಕೂಡ ನಡೆಯುತ್ತದೆ.

ದೀಪಾವಳಿ ದಿನ 4

ಈ ದಿನ ಕಾರ್ತಿಕ ಪ್ರತಿ ಪದೆ ತಿಥಿ ಜಾರಿಯಲ್ಲಿರುತ್ತದೆ. ಈ ದಿನ ಕತ್ತಲೆಯಿಂದ ಬೆಳಕಿನೆಡೆಗೆ ಜನರು ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನ ಬಲೀಂದ್ರ ಪೂಜೆ, ಗೋವರ್ಧನ ಪೂಜೆ ಸಲ್ಲಿಸುತ್ತಾರೆ.  

ದೀಪಾವಳಿ ದಿನ 5nbsp;

ಈ ದಿನ ಸೋದರ ಬಿದಿಗೆಯೊಂದಿಗೆ 5 ದಿನಗಳ ಹಬ್ಬವನ್ನು ಜನರು ಮುಕ್ತಾಯಗೊಳಿಸಲಿದ್ದಾರೆ.


–>