ಇದೂವರೆಗೂ ವಿಜ್ಞಾನಿಗಳಿಗೆ ಕಣ್ಣೀರಿನ ಉದ್ದೇಶವನ್ನು ನಿಖರವಾಗಿ ವಿವರಿಸಲು ಸಾಧ್ಯವಾಗಿಲ್ಲ. ಕಣ್ಣಿನಲ್ಲಿ ಧೂಳುತುಂಬಿಕೊಂಡು ಅದನ್ನು ಹೊರದೂಡಲು ಕಣ್ಣೀರು ಹರಿಯುತ್ತದೆ, ಎನ್ನುತ್ತಾರೆ.
ಹಾಗಾದರೆ, ದೇಹದ ಬೇರೆ ಯಾವುದೇ ಅಂಗಕ್ಕೆ ,ಪೆಟ್ಟಾದಾಗ,
ದುಃಖಿತರಾದಾಗ ಅಥವಾ ಆನಂದಿತರಾದಾಗ ಕಣ್ಣೀರೇಕೆ ಬರಬೇಕು. ಅಂತಹ ಸಮಯದಲ್ಲಿ ಕಣ್ಣಲ್ಲಿ ಧೂಳು ಹೇಗೆ ಬೀಳುತ್ತದೆ?
ಅತಿಯಾದ ನೋವು ಅಥವಾ ನಲಿವು ಉಂಟಾದಾಗ ,ಮನಸ್ಸು ತುಂಬಿ ಬಂದಾಗ ಕಣ್ಣೀರು ಹರಿಯತೊಡಗುತ್ತದೆ.ಬಾಷ್ಪಗ್ರಂಥಿಗಳು ಚೇತರಿಕೆ ಗೊಂಡು ಕಣ್ಣೀರು ಹರಿಯಲು ಪ್ರಾರಂಭಿಸುತ್ತದೆ.
ಭಕ್ತರು ಕೂಡಾ ಅಳುತ್ತಾರೆ,ಆದರೆ ಅವರ ಕಣ್ಣೀರಿಗಿರುವ ಗುಣಗಳು ಬೇರೆ.ಭಕ್ತ ರಲ್ಲದವರು ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವನಿಗೆ ಜೀವನದಲ್ಲಿ ಏನೋ ಕಷ್ಟ ವಿರಬೇಕು ,ಅದನ್ನು ಸಹಿಸಿಕೊಳ್ಳಲಾಗದೇ ,ಕೈ ಮುಗಿದು ಅಳುತ್ತಿದ್ದಾನೆ ಎಂದು ಅನ್ನಿಸಬಹುದು. ಯಾರು ಕಷ್ಟಗಳ ಕಾರಣದಿಂದ ಕಣ್ಣೀರಿಡುತ್ತಾನೋ ಅವನು ಭಕ್ತನೇ ಅಲ್ಲಾ .ಭಕ್ತಿ ಯ ಬಗ್ಗೆ ಅವನಿಗೆ ಏನೇನೂ ತಿಳಿದಿರುವುದೇ ಇಲ್ಲಾ.ಅವನು ತನ್ನ ಸ್ವಂತ ಅಸ್ತಿತ್ವದ ಕೇಂದ್ರ ಬಿಂದುವಾಗಿರುತ್ತಾನೆ.
ಆದರೆ ಕೆಲವೊಮ್ಮೆ ನಮ್ಮ ಅಂತರಾಳದಲ್ಲಿ ಗಟ್ಟಿಯಾಗಿ ಹುದುಗಿರುವ, ನಿರ್ಭಾವುಕತೆ,ನಿಷ್ಟುರತೆ ಕರಗತೊಡಗಿ ,ಅದರ ಅರಿವು ಮೂಡುವುದರಿಂದ ಕಣ್ಣೀರು ತನಗೆ ತಾನೇ ಹರಿಯತೊಡಗುತ್ತದೆ. ಹಾಗೇ ನಮ್ಮ ಸುತ್ತಲಿನ ಜಗತ್ತಿಗೆ ಪ್ರತಿಯಾಗಿ ಕೃತಜ್ಞತೆಗಳನ್ನು ,ಧನ್ಯವಾದಗಳನ್ನು ಅರ್ಪಿಸಲು ಕಣ್ಣೀರು ತನಗೆ ತಾನೇ ಹರಿಯುತ್ತದೆ. ಪ್ರಕೃತಿಯಿಂದ ನಮ್ಮೆಡೆಗೆ ಹರಿದು ಬರುತ್ತಿರುವ ಕರುಣೆಗೆ ಪ್ರತಿಯಾಗಿ ಅರ್ಪಿಸಲು ನಮ್ಮ ಬಳಿ ಕಣ್ಣೀರು ಬಿಟ್ಟರೆ ಬೇರೇನೂ ಇಲ್ಲಾ. ಇಂತಹ ಭಾವನೆ ಬರುತ್ತದೆ ಎಂದು ನಾವೆಂದೂ ಕನಸನ್ನೂ ಕಂಡಿರುವುದಿಲ್ಲ.ಕಣ್ಣೀರ ಹೊರೆತು ,ಕೃತಜ್ಞತೆಗಳನ್ನು ಅರ್ಪಿಸಲು ನಮ್ಮಲ್ಲಿ ಬೇರೇನೂ ಇಲ್ಲಾ.ಪದಗಳಾಗಲೀ ,ಮತ್ತೊಂದಾಗಲೀ ಅದನ್ನು ವರ್ಣಿಸಲು ಸಾಧ್ಯವೇಇಲ್ಲ. ಇಂತಹ ಕ್ಷಣಗಳಲ್ಲಿ ಕಣ್ಣುಗಳು ಬೇರೊಂದು ರೀತಿಯಲ್ಲಿ ಅಳುತ್ತವೆ.
ಒಬ್ಬ ಪ್ರೇಮಿಯು ಕೂಡಾ ಅಳಬಹುದು,ಆದರೆ ಆ ಅಳುವಿಗೆ ಬೇರೆ ಗುಣಗಳಿರುತ್ತವೆ.ಅದು ಆಸೆ ,ಬೇಡಿಕೆಗಳಿಂದ ತುಂಬಿರುತ್ತದೆ. ಅಷ್ಟೇ.ಆದರೆ ನಿಜ ಭಕ್ತನ ಕಣ್ಣೀರಿನಲ್ಲಿ ಯಾವುದೇ ಆಸೆ ಬೇಡಿಕೆಗಳಿರುವುದಿಲ್ಲಾ.ಅವನ ಕಣ್ಣು ಕಾರಣವಿಲ್ಲದೇ ಅಳುತ್ತವೆ, ಅವನು ಅದನ್ನು ನಿಯಂತ್ರಿಸಲು ನಿಸ್ಸಹಾಯಕನಾಗಿರುತ್ತಾನೆ.ಅವನೆಷ್ಟು ಭಾವಪರವಶನಾಗಿರುತ್ತಾನೆಂದರೆ,ಕೃತಜ್ಞತೆಗಳನ್ನು ತಿಳಿಸಲು ಯಾವ ಪದಗಳು ಸಹ ಅವನ ಬಾಯಿಗೆ ಬರುವುದಿಲ್ಲ.
ಯಾವಾಗ ಬಾಯಿ ಮಾತನಾಡುವುದಿಲ್ಲವೊ,ಆಗ ಕಣ್ಣು ಗಳು ತಮ್ಮದೇ ರೀತಿಯಲ್ಲಿ ಮಾತನಾಡುತ್ತವೆ. ಆರಾಧನೆಯ ಸಾರ್ಥಕತೆ ,ಸಂಪೂರ್ಣತೆ, ಕಣ್ಣೀರಿನಲ್ಲಿದೆ,ಅದರ ಹರಿವಿನಲ್ಲಿದೆ.
- ಸುವರ್ಣಾ ಮೂರ್ತಿ
Subscribe , Follow on
Facebook Instagram YouTube Twitter X WhatsApp