-->

30 Daily Self care Useful tips for senior citizens

ಒಂದು ಮುಖ್ಯವಾದ ವಿಷಯ , 60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ, 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ. ನೇರಮಾತುಗಳು ದಯವಿಟ್ಟು ತಾಳ್ಮೆಯಿಂದ ಪೂರ್ತಿ ಓದಿರಿ , ಆಲೋಚಿಸಿರಿ , ಚಿಂತಿಸ ಬೇಡಿ. 

1. ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ, ಚಿಲಕ ಹಾಕಬೇಡಿ. *ಸ್ಟೂಲು ಅಥವಾ ಚೇರ್ ಮೇಲೆ ಕೂತ್ಕೊಂಡು ಸ್ನಾನ ಮಾಡಬೇಕು *ನಿಂತುಕೊಂಡು ಸ್ನಾನ ಮಾಡಬಾರದು
2 . ಕಮೋಡ್ ಮೇಲೆ ಕೂತುಕೊಂಡಾಗ ಏಳುವುದಕ್ಕೂ, ಕುಳಿತುಕೊಳ್ಳುವುದಕ್ಕೂ *ಒಂದು ರಾಡನ್ನು ಹಾಕಿಸಿಕೊಳ್ಳುವುದು ಸಪೋರ್ಟ್*               
3. ಹೆಂಗಸರಾಗಲಿ ಗಂಡಸರಾಗಲಿ ಪ್ಯಾಂಟನ್ನು ಹಾಕಿಕೊಳ್ಳುವಾಗ ಚೇರ್ ಮೇಲೆ ಅಥವಾ ಬೆಡ್ ಮೇಲೆ ಕೂತ್ಕೊಂಡು ಹಾಕಿಕೊಳ್ಳಬೇಕು *ನಿಂತಿ ಕೊಂಡು ಹಾಕಿಕೊಳ್ಳಬಾರದು.          
4. ನಿದ್ದೆ ಮಾಡಿ ಎಳುವಾಗ ಎದ್ದು ಕೂತುಕೊಂಡು *30 ಸೆಕೆಂಡು ನಂತರ ಓಡಾಡಬೇಕು ಮುಖ್ಯವಾಗಿ ರಾತ್ರಿಯ ಹೊತ್ತು
5. ಒದ್ದೆ ಅಂದರೆ *ನೀರು ಇರುವ ಜಾಗದಲ್ಲಿ ಓಡಾಡಬಾರದು.
6. ಚೇರ್, ಬೆಂಚ್ *ಇವುಗಳ ಮೇಲೆ ನಿಂತು ಯಾವುದೇ ಕೆಲಸವನ್ನು ಮಾಡಬೇಡಿ
7. ವಾಹನಗಳನ್ನು ಓಡಿಸುವಾಗ ಕಾರ್ ಅಥವಾ ಬೈಕ್ ನಲ್ಲಿ *ಒಬ್ಬರೇ ಹೋಗಬೇಡಿ ಯಾರಾದರೂ *ಜೊತೆಯಲ್ಲಿ ಇರಬೇಕು.
8. ಯಾವುದೇ ಮೆಡಿಸನ್ ತೆಗೆದುಕೊಂಡರೆ *ಡಾಕ್ಟರನ್ನು ಕೇಳಿ ತೆಗೆದುಕೊಳ್ಳಿ ನೀವಾಗೆ ತೆಗೆದುಕೊಳ್ಳಬೇಡಿ     
9. ನಿಮಗೆ ಏನು ಅನಿಸುತ್ತೋ ಅದನ್ನೇ ಮಾಡಿ ನಿಮಗೆ ಹೇಗೆ ಸಮಾಧಾನವಾಗುತ್ತದೆಯೊ, *ಯಾರೋ ಹೇಳಿದರು ಅಂತ ಮಾಡಬೇಡಿ.          
10. ಎಲ್ಲಿಗಾದರೂ (ಬ್ಯಾಂಕ್, ಶಾಪ್, ಶಾಪಿಂಗ್, ಮಾರ್ಕೆಟ್) ಹೋಗಬೇಕಾದರೆ ಗಂಡ ಅಥವಾ ಹೆಂಡತಿ ಇಲ್ಲಾಂದರೆ ಮಕ್ಕಳು *ಯಾರಾದರೂ ಸರಿ ಅವರ ಜೊತೆ ಹೋಗಬೇಕು
11. ಮನೆಯಲ್ಲಿ ಒಬ್ಬರೇ ಇರಬೇಕಾದರೆ *ಗುರುತು ಪರಿಚಯ ವಿಲ್ಲದವರನ್ನು ಮನೆಯೊಳಗೆ ಸೇರಿಸಬೇಡಿ
12. ಮನೆಯ ಮೈನ್ ಡೋರ್ ಕೀಲಿ ಕೈ *ಗಂಡನ ಹತ್ತಿರ ಒಂದು ಹೆಂಡತಿಯ ಹತ್ತಿರ ಒಂದು ಇರಬೇಕು.           
13. ನಿಮ್ಮ ಬೆಡ್ ರೂಮಿನಲ್ಲಿ *ಒಂದು ಕಾಲ್ ಬೆಲ್ ಇದ್ದರೆ ಒಳ್ಳೆಯದು ಎಮರ್ಜೆನ್ಸಿ ಇದ್ದರೆ ಕರೆಯುವುದಕ್ಕೆ.
14. ಎಲ್ಲರ ಜೊತೆಯಲ್ಲೂ *ನಯ ವಿನಯದಿಂದ ಮಾತಾಡಿ   
15. ಯಾವಾಗಲೂ ನಿಮ್ಮ ಹಿಂದಿನ ಮುಂದಿನ ವಿಷಯಗಳ ಬಗ್ಗೆ ಯೋಚನೆ ಮಾಡಬೇಡಿ *ಈಗ ನಡೆಯುವ ಬಗ್ಗೆ ಯೋಚಿಸಿ ಇದು ಮುಖ್ಯವಾದ ವಿಷಯ                       

Self care Useful tips for senior citizens


16. ಈ ವಯಸ್ಸಿನಲ್ಲಿ ನೆಮ್ಮದಿಯ ಜೀವನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಖುಷಿಯಾಗಿರುವುದು *ಒಳ್ಳೆಯ ಸಂಬಂಧಗಳು ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು.   
17.ಯಾವ ಜ್ಯೋತಿಷ್ಯಿಗಳನ್ನ,ಶಾಸ್ತ್ರ ಹೇಳುವವ *ಮನೆಯ ಒಳಗೆ ಸೇರಿಸಿಕೊಳ್ಳ ಬೇಡಿ
18.ರಸ್ತೆಯ ಬದಿಯಲ್ಲಿ ಹೋಸ ವ್ಯಕ್ತಿಗಳೊಂದಿಗೆ ವಾದ ವಿವಾದ ಮಾಡಿಕೊಳ್ಳ ಬೇಡಿ.
19. ರಸ್ತೆಯಲ್ಲಿ ಹೋಗುವಾಗ ಯಾರಾದರೂ ಏನಾದರೂ ಕೊಟ್ಟಲ್ಲಿ ತೆಗೆದುಕೊಳ್ಳ ಬೇಡಿ.
20.ಅಪರಿಚಿತರ ಸಂಗಡ ಮಾತಾಡ ಬೇಡಿ,ವ್ಯವಹರಿಸ ಬೇಡಿ.
21.ನಿಮ್ಮ ಮನೆಯ ವಿಳಾಸ,ಮಕ್ಕಳ,ನಿಮ್ಮವರ,ನೆರಮನೆಯವರ ದೂರವಾಣಿ ಸಂಖ್ಯೆ ಬರೆದಿಟ್ಟುಕೊಳ್ಳಿ.
22.ನಿಮ್ಮ ಮಕ್ಕಳ,ಮೋಮ್ಮಕ್ಕಳ ಬಗ್ಗೆ ಯಾರಿಗೂ ಹೇಳ ಬೇಡಿ.
23.ಮಕ್ಕಳು ಕೆಲಸ ಮಾಡುವ ವಿಳಾಸ , ದೂರವಾಣಿ ಸಂಖ್ಯೆ ಯನ್ನ ಯಾರೊಂದಿಗೂ ಹಂಚಿಕೊಳ್ಳಲು ಹೋಗ ಬೇಡಿ.
24. ಬಸ್,ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಲಗ್ಗೇಜ್ ಒಯ್ಯ ಬೇಡಿ.
25. ಅಂತಿಮವಾಗಿ, ಕಟ್ಟಕಡೆಯದಾಗಿ ತಿಳಿಸುವುದೇನೆಂದರೆ ಯಾವುದೇ ಕಾರಣ ಕ್ಕೂ ಅಪ್ಪಿ,ತಪ್ಪಿ ಯಾವುದೆ ಪತ್ರ ವ್ಯವಹಾರಗಳನ್ನ ನಿಮ್ಮ ವರು / ಬೇಕಾದವರು/ಮಕ್ಕಳು ಇಲ್ಲದಾಗ ಸಹಿ ಹಾಕುವುದು,ಕೊಡುವುದು,ಹರಿಯುವುದು ಮಾಡಲೆ ಬೇಡಿ. 26.ನಿಮ್ಮ ಬ್ಯಾಂಕ್ ವಿವರಗಳನ್ನ ಯಾರಿಗೂ ತಿಳಿಸಲೆ ಬೇಡಿ.
27.ನಿಮ್ಮ ಮೋಬೈಲ್ ಸಂಖ್ಯೆ,ಈ ಮೈಲ್ ಪಾಸ್ ವರ್ಡ್ ,ಓಟಿಪಿ ಗಳನ್ನ ಯಾರಿಗೂ ಹೇಳ ಬೇಡಿ.
28.ಸದಾ ನಿಮ್ಮೋಂದಿಗೆ ಸಣ್ಣ ಪುಸ್ತಕ, ಪೆನ್ ,ಬಿಳಿಯ ಹಾಳೆಯನ್ನ ಒಂದು ಸೈಡ್ ಬ್ಯಾಗ್ ನಲ್ಲಿಟ್ಟುಕೊಳ್ಳಿ.ನಿಮ್ಮೋಡನೆ ಸದಾ ಇರಲಿ.
29. ನಿಮ್ಮ ಬಳಿ ಇರುವ ಹಣವನ್ನ ಒಂದೆ ಜೇಬಿನಲ್ಲಿ ಇಟ್ಟುಕೊಳ್ಳದೆ ಎಲ್ಲಾ ಜೇಬಿಗು ಬಿಡಿ, ಬಿಡಿಯಾಗಿಟ್ಟುಕೊಳ್ಳಿ.
30. ಆಟೋ,ಓಲಾ, ಬಸ್ ಗಳಲ್ಲಿ ಪ್ರಯಾಣಿಸುವಾಗ ಹೋಗ ಬೇಕಾದ ಸ್ಥಳ, ಅಂದಾಜು ಚಾರ್ಜ್ ಮಾತ್ರ ಮೇಲಿಟ್ಟುಕೊಳ್ಳಿ.

ಯೋಚನೆ ಮಾಡ ಬೇಡಿ, ಆದರೆ ತಪ್ಪದೆ ಹುಷಾರಾಗಿರಿ

–>