-->

Interesting health facts of Avarekaayi Hyacinth beans

ಅವರೆಕಾಯಿಯನ್ನ ಪ್ರಪಂಚದ ಬೇರೆಬೇರೆ ಕಡೆ ಯಾಕೆ ಉಪಯೋಗಿಸ್ತಾರೆ ಅಂತ ಕೇಳಿ ಇನ್ಮುಂದೆ ಕಣ್ಣಿಗ್ ಒತ್ಕೊಂಡ್ ತಿಂತೀರಾ" , ನಂಬಲಾರದ 15 ಉಪಯೋಗಗಳು


ಅವರೆಕಾಯಿ ನಮ್ಮಲ್ಲಷ್ಟೇ ಅಲ್ಲ, ಇಡೀ ಪ್ರಪಂಚದಲ್ಲಿ ಬಳಕೆಯಾಗುತ್ತೆ. ಹೆಚ್ಚಾಗಿ ಆಫ್ರಿಕಾ, ಮತ್ತು ಏಶಿಯಾ ಖಂಡಗಳಲ್ಲಿ ಬೆಳೆಯೋ ಇದನ್ನ ತಲೆತಲಾಂತರದಿಂದ ಜನ ಯಾವ ಕಾರಣಗಳಿಗೆ ಉಪಯೋಗಿಸಿಕೊಂಡು ಬಂದಿದಾರೆ ಅಂದ್ರೆ ನಂಬಕ್ಕಾಗಲ್ಲ. ಅವರೆಕಾಳು, ಅವರೆ ಎಲೆ, ಅವರೆ ಸಿಪ್ಪೆ, ಅವರೆ ಹೂವು, ಅವರೆ ಕಾಂಡ, ಎಲ್ಲವೂ ಅಮೃತ! ಕೆಳಗೆ ನಿಮಗಾಗಿ ಈ ಅವರೆಕಾಯಿಯ 15 ಉಪಯೋಗಗಳ ಪಟ್ಟಿ ಮಾಡಿದೀವಿ. ಓದಿ, ತಿನ್ನಿ, ಆರೋಗ್ಯವಾಗಿರಿ!

1. ತಲೆ ನೋವು ಕಡಿಮೆ ಮಾಡಕ್ಕೆ:

ಅವರೆ ಎಲೆಗಳನ್ನು ಜಜ್ಜಿ ಅದರ ವಾಸನೆ ನೋಡಿದರೆ ಸಾಕು ತಲೆ ನೋವು ಕಡಿಮೆಯಾಗತ್ತಂತೆ. ಪೂರ್ವ ಆಫ್ರಿಕಾ ದೇಶದಲ್ಲಿ ಈ ಪದ್ದತಿ ಇದೆಯಂತೆ.

2. ಮಗುವಿನ ಜನನ ಪ್ರಕ್ರಿಯೆ ಸರಾಗ ಮಾಡಕ್ಕೆ:

ಅವರೆಕಾಳಿನ ಕಷಾಯ, ಅವರೆ ಹೂವಿನ ಕಷಾಯ ಮಾಡಿ ಕುಡಿದರೆ ಜನನ ಪ್ರಕ್ರಿಯೆ ಸರಾಗ ಆಗತ್ತೆ ಅಂತ ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಾರಂತೆ.

3. ಹೆಂಗಸರ ತಿಂಗಳ ತೊಂದರೆ ಸರಿಮಾಡಕ್ಕೆ:

ಅವರೆ ಹೂವನ್ನು ತಮ್ಮ ನಿತ್ಯ ಅಹಾರದಲ್ಲಿ ಬಳಸಿದರೆ ತಿಂಗಳ ಚಕ್ರ ಸರಿಹೋಗತ್ತಂತೆ. ಹೆಂಗಸರಿಗೆ ಸೊಂಟದ ಭಾಗಕ್ಕೆ ರಕ್ತ ಸಂಚಾರ ಜಾಸ್ತಿಯಾಗುವಂತೆ ಮಾಡುತ್ತದಂತೆ. ಪೂರ್ವ ಆಫ್ರಿಕಾ ದೇಶದಲ್ಲಿ ಈ ಪದ್ದತಿ ಇದೆಯಂತೆ.

4. ಹೊಟ್ಟೆಯ ತೊಂದರೆ ಕಡಿಮೆ ಮಾಡಕ್ಕೆ:

ಭೇದಿ, ಹೊಟ್ಟೆ ನುಲಿತ, ಹೊಟ್ತೆ ಉಬ್ಬರ ಇದ್ದರೆ ಅವರೆಕಾಳು ಬಳಕೆ ಒಳ್ಳೆದು. ನಮ್ಮ ದೇಶದಲ್ಲಿ ಮತ್ತು ಚೈನಾದಲ್ಲಿ ಇದರ ಬಳಕೆ ಹೆಚ್ಚು.

5. ಹಾವು ಕಡಿದಾಗ ವಿಷ ಏರುವುದನ್ನು ತಡೆಯಕ್ಕೆ:

ಅವರೆ ಎಲೆಯನ್ನು ಜಜ್ಜಿ ವಿನೆಗರ್ ಜೊತೆ ಸೇರಿಸಿ ಬೆಚ್ಚಾರ(ಪೌಲ್ಟೀಸ್) ಮಾಡಿ ಕಚ್ಚಿದ ಜಾಗಕ್ಕೆ ಕಟ್ಟುತಾರಂತೆ. ಪೂರ್ವ ಆಫ್ರಿಕಾ ದೇಶದಲ್ಲಿ ಈ ಪದ್ದತಿ ಇದೆಯಂತೆ.

6. ತರಕಾರಿಯಾಗಿ ತಿನ್ನುವುದಕ್ಕೆ:

ಎಳೆ ಅವರೆ ಸಿಪ್ಪೆ, ಅವರೆ ಕಾಳು ಮತ್ತು ಎಲೆಗಳನ್ನು ತಿನ್ನಲು ಬಳಸುತ್ತಾರೆ. ಅವರೆಕಾಳು ಪ್ರೋಟೀನ್, ಕಬ್ಬಿಣಾಂಶ, ಮೆಗ್ನೀಶಿಯಂ, ಫಾಸ್ಫರಸ್, ಸತು ಮತ್ತು ಹೇರಳವಾಗಿ ವಿಟಮಿನ್ ಬಿ ಮತ್ತು ಸಿ ಹೊಂದಿದೆ.

7. ಹೃದಯದ ತೊಂದರೆ ನಿವಾರಿಸಕ್ಕೆ:

ಅವರೆಕಾಯಿಯಲ್ಲಿ ಸಹಜವಾಗಿ ಆಂಟಿ-ಆಕ್ಸಿಡೆಂಟ್ಸ್ ಇರುವುದರಿಂದ ಹೃದಯದ ಆರೋಗ್ಯಕ್ಕೆ ಸಹಕಾರಿ. ರುವಾಂಡ ದೇಶದಲ್ಲಿ ಅನೇಕ ಸಸ್ಯಗಳ ಜೊತೆ ಅವರೆ ಎಲೆಯ ರಸವನ್ನು ಸೇರಿಸಿ ಔಷಧಿ ತಯಾರಿಸುತ್ತಾರಂತೆ.

Interesting health facts of Avarekaayi Hyacinth beans


8. ಟಾನ್ಸಿಲ್ಸ್ ಊತ ಅಥವಾ ಕಿವಿಯ ಊತ ಕಡಿಮೆ ಮಾಡಕ್ಕೆ:

ಅವರೆ ಸಿಪ್ಪೆಯ ರಸ ತೆಗೆದು ಅದಕ್ಕೆ ಉಪ್ಪು ಸೇರಿಸಿ ಬಳಸಬೇಕಂತೆ. ಕಾಂಗೋ ದೇಶ ಈ ಪದ್ದತಿ ಇಟ್ಟುಕೊಂಡಿದೆಯಂತೆ.

9. ಹೈನುಗಳ ಕಣ್ಣು ಮತ್ತು ಶ್ವಾಸಕೋಶದ ತೊಂದರೆ ಕಡಿಮೆ ಮಾಡಕ್ಕೆ:

ಹೈನುಗಳಿಗೆ ತಿನ್ನಕ್ಕೆ ಅವರೆ ಸಿಪ್ಪೆ ಅಥವಾ ಕಾಳು ಹಾಕಿದರೆ ಒಳ್ಳೆಯ ಪ್ರೋಟೀನ್ ದೇಹಕ್ಕೆ ದೊರೆತು ಅರೋಗ್ಯಕರವಾಗತ್ತಂತೆ. ಕೇನ್ಯ ದೇಶದಲ್ಲಿ ಈ ಪದ್ದತಿ ಇವತ್ತಿಗೂ ನಡೆಸುತ್ತಾರಂತೆ.

10. ದೇಹದಲ್ಲಿ ಗ್ಲುಕೋಸ್ ಅಂಶದ ಸಮತೋಲನಕ್ಕೆ:

ಅವರೆಕಾಳಿನಿಂದ ಮಾಡಿದ ಅಡುಗೆ ತಿಂದರೆ ಹೊಟ್ಟೆ ಬರ್ತಿ ಆಗತ್ತೆ, ಜೀರ್ಣ ಆಗುವುದು ನಿಧಾನ. ಹಾಗಾಗಿ ರಕ್ತಕ್ಕೆ ಗ್ಲುಕೋಸ್ ಅಂಶ ನಿಧಾನವಾಗಿ ಬಿಡುಗಡೆ ಆಗತ್ತೆ. ಸಕ್ಕರೆ ಮಟ್ಟ ಕಾಪಾಡ್ಕೊಳಕ್ಕೆ ಸಹಾಯ ಆಗತ್ತೆ.

11. ಹೆಂಡದ ಚಟ ಇಳಿಸಕ್ಕೆ:

ಚೈನಾದಲ್ಲಂತೂ ಕುಡಿಯುವ ಚಟ ಕಡಿಮೆ ಮಾಡಕ್ಕೆ ಅವರೆಕಾಯಿ ಬಳಸುತ್ತಾರಂತೆ.

12. ಚರ್ಮದ ಸೊಂಕು ನಿವಾರಿಸಕ್ಕೆ:

ಅವರೆ ಎಲೆ ಮತ್ತು ಹೂವನ್ನು ಜಜ್ಜಿ ಅಕ್ಕಿ ಹಿಟ್ಟು ಮತ್ತು ಅರಿಶಿನದ ಜೊತೆ ಎಕ್ಸಿಮಾ ಆಗಿರುವ ಜಾಗಕ್ಕೆ ಹಚ್ಚಬಹುದು.

13. ಗುಪ್ತಾಂಗದ ಸೊಂಕು ನಿವಾರಿಸಕ್ಕೆ:

ಅವರೆ ಎಲೆಗಳ ಕಷಾಯ ತಯಾರಿಸಿ ಕೆರೆತ ಮತ್ತು ಉರಿ ಇರುವ ಗುಪ್ತಾಂಗವನ್ನು ತೊಳೆಯಬಹುದಂತೆ. ಏಶಿಯಾದ ಆಗ್ನೇಯ ಪ್ರಾಂತ್ಯದ (ಬರ್ಮಾ, ಥೈಲ್ಯಾಂಡ್, ಫಿಲ್ಲಿಪ್ಪಿನ್ಸ್, ಮಲೇಶಿಯಾ) ದೇಶದವರು ಬಳಸುತ್ತಾರಂತೆ

14. ಗೆಡ್ಡೆ ಮತ್ತು ಕುರುಗಳನ್ನ ಹೋಗಲಾಡಿಸಕ್ಕೆ:

ಎಲೆಯ ಕಷಾಯದ ಜೊತೆ ಸ್ವಲ್ಪ ನಿಂಬೆ ರಸ ಸೇರಿಸಿ ಕುರು ಅಥವಾ ಗೆಡ್ದೆ ಇರುವ ಜಾಗಕ್ಕೆ ಹಚ್ಚಬಹುದಂತೆ. ಮಲೇಶಿಯಾದ ಜನ ಇದನ್ನು ಹೆಚ್ಚಾಗಿ ಬಳಕೆ ಮಾಡ್ತಾರಂತೆ.

15. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಕ್ಕೆ:

ಅವರೆಕಾಳಿನಿಂದ ಮಾಡಿದ ಯಾವುದೇ ಅಡುಗೆ ಅಥವಾ ತಿಂಡಿ ತಿಂದರೆ ಹೊಟ್ತೆ ಬೇಗ ತುಂಬತ್ತೆ. ಆದ್ರಿಂದ ಇದು ತೂಕ ಇಳ್ಸಕ್ಕೆ ಪ್ರಯೋಜನ ಆಗತ್ತೆ. ಅಮೇರಿಕಾಲಿ ಇದರ ಸಂಶೋಧನೆ ನಡೆಸಿದ್ದಾರೆ.

ಇಂದಿಗೂ ಆಪ್ರಿಕಾದ ಬುಡಕಟ್ಟು ಜನಾಗದವರು ಅವರೆಕಾಳಿನ ಕಾಂಡವನ್ನೂ ಕೂಡ ಕಾಲೆರಾ ರೋಗ ಬಂದಾಗ ಬಳಸುತ್ತಾರಂತೆ.

ಅವರೆಕಾಳು ತಿನ್ನಲು ಬಹಳ ರುಚಿ ಆದ್ರೆ ಬೇಯಿಸಿಯೋ, ಹುರಿದೋ ಅಥವಾ ಕರಿದೋ ತಿನ್ನಬೇಕು. ಹಸಿ ತಿಂದಿರೋ ಸಾಕಷ್ಟು ನರಳಬೇಕಾಗತ್ತೆ. ಹುಷಾರು!

–>