೧೯೧೯ನೆಯ ವರ್ಷದಲ್ಲಿ, ಫ್ಲೂ ರೋಗವು ನಾಲ್ಕು ಕೋಟಿ ಜನರ ಮರಣಕ್ಕೆ ಕಾರಣವಾಯಿತು.
ಈ ಕಾಯಿಲೆಗೆ ತುತ್ತಾದ ರೈತರನ್ನು ನೋಡಲು, ಹಾಗೂ ಫ್ಲೂ ರೋಗವನ್ನು ಪರಿಣಾಮಕಾರಿಯಾಗಿ ಹೋರಾಡಲು ಏನು ಮಾಡಬಹುದು ಎಂಬ ವಿಷಯದಲ್ಲಿ ಆಸಕ್ತಿ ತಾಳಿದರು.
ಬಹಳಷ್ಟು ರೈತರು ಹಾಗು ಅವರ ಕುಟುಂಬದವರು ಫ್ಲೂ ಕಾಯಿಲೆ ತಗುಲಿದ್ದರ ಕಾರಣ ಮೃತರಾದರು.
ಆದಾಗ್ಯೂ, ಆ ವೈದ್ಯರು, ಫ್ಲೂ ಕಾಯಿಲೆ ತಗಲದೇ ಇದ್ದು, ಆರೋಗ್ಯವಂತರಾಗಿದ್ದ ಕುಟುಂಬದ ಜನರನ್ನು ಭೇಟಿ ಮಾಡಿದರು.
ಅವರೆಲ್ಲರೂ ಆರೋಗ್ಯವಂತರಾಗಿರವುದಕ್ಕೆ, ಉಳಿದವರಿಗಿಂತ ಭಿನ್ನವಾಗಿರುವ ಕಾರ್ಯವನ್ನೇನು ಮಾಡಿದಿರೆಂದು ವೈದ್ಯರು ಕೇಳಿದರು.
ಸಿಪ್ಪೆಯನ್ನು ಸುಲಿಯದೇ ಇದ್ದ ಈರುಳ್ಳಿಯನ್ನು ಒಂದು ತಟ್ಟೆಯಲ್ಲಿಟ್ಟು ತಮ್ಮ ಮನೆಯ ಎಲ್ಲಾ ಕೋಣೆಯಲ್ಲಿ ಒಂದೊಂದು ತಟ್ಟೆಯಂತೆ ಇಡಲಾಯಿತೆಂದು ಆ ಮನೆಯ ರೈತನ ಹೆಂಡತಿ ಉತ್ತರಿಸಿದಳು.
ಆ ವೈದ್ಯರು, ಬಹುಶಃ ಆ ವಿಧಾನವು ರೋಗನಿವಾರಣೆಗೆ ಕಾರಣವಾಗಿರಬಹುದೆಂದು ಯೋಚಿಸಿ, ಆ ಈರುಳ್ಳಿಗಳಲ್ಲಿ ಒಂದನ್ನು ತಂದು ತೋರಿಸಲು ಹೇಳಿದರು.
ಆ ಈರುಳ್ಳಿಯನ್ನು ವೈದ್ಯರು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ವೀಕ್ಷಿಸಿದಾಗ ಅದರಲ್ಲಿ ಫ್ಲೂ ರೋಗದ ಸೂಕ್ಷ್ಮಾಣುಗಳು ಗೋಚರವಾದವು. ಆ ಈರುಳ್ಳಿಗಳು ಸಹಜ ಹಾಗೂ ನಿಖರವಾಗಿ ಸೂಕ್ಷ್ಮರೋಗಾಣುಗಳನ್ನು ತಮ್ಮೆಡೆಗೆ ಸೆಳೆದುಕೊಂಡ ಕಾರಣವಾಗಿ ಆ ಮನೆಯಲ್ಲಿನವರನ್ನೂ (ಕುಟುಂಬವನ್ನು ) ಆರೋಗ್ಯವಂತ ಸ್ಥಿತಿಯಲ್ಲಿ ಇರಿಸಿದವು.
ನಾನು ಈ ಸಂಗತಿಯನ್ನು ನನಗೆ ಆರೋಗ್ಯದ ವಿಷಯಗಳ ಬಗ್ಗೆ ನಿಯತಕಾಲಿಕವಾಗಿ ಸಮೀಕ್ಷೆಗಳನ್ನು ನೀಡುತ್ತಲಿರುವ ಒಬ್ಬ ಗೆಳೆಯರಿಗೆ ಕಳಿಸಿದೆನು. ಅವರು, ಈರುಳ್ಳಿಯ ಬಗ್ಗೆ ಅತ್ಯಂತ ಆಸಕ್ತಿಕರವಾದ ಅನುಭವದೊಂದಿಗೆ ಉತ್ತರಿಸಿದರು.
"ನನಗೆ ವಿಷಯವನ್ನು ನೆನಪಿಸಿದುದಕ್ಕಾಗಿ ಧನ್ಯವಾದಗಳು. ನನಗೆ ಆ ರೈತರ ಘಟನೆಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ! ಆದರೆ, ನನಗೆ ನ್ಯುಮೋನಿಯಾ ಆದಾಗ ತುಂಬಾ ಅನಾರೋಗ್ಯದ ಸ್ಥಿತಿ ಇತ್ತು. ಈರುಳ್ಳಿಯ ಕುರಿತು ನನ್ನ ಮುಂಚಿನ ತಿಳುವಳಿಕೆ ಹಾಗೂ ಅನುಭವದ ಪ್ರಕಾರ, ನಾನು ಈರುಳ್ಳಿಯ ಎರಡೂ ತುದಿಗಳನ್ನು ಕತ್ತರಿಸಿ ಅದನ್ನು ಒಂದು ಖಾಲಿ ಪಾತ್ರೆಯಲ್ಲಿಟ್ಟು, ರಾತ್ರಿಯಿಡೀ ನನ್ನ ಸಮೀಪದಲ್ಲಿ ಇಟ್ಟುಕೊಂಡು ನಿದ್ರಿಸಿದೆನು.
ಮುಂಜಾನೆಯಾಗುವಷ್ಟರಲ್ಲಿ, ನಾನು ಸುಧಾರಿಸಿದಂತೆ ಅನುಭವವಾಯಿತು, ಅಂತೆಯೇ ಆ ಈರುಳ್ಳಿಯು ಕಪ್ಪು ವರ್ಣಕ್ಕೆ ತಿರುಗಿತ್ತು!"
ಬಹಳಷ್ಟು ಸಲ ನಮಗೆ ಉದರ ಸಂಬಂಧಿ ತೊಂದರೆಗಳಾದಾಗ ಯಾವುದನ್ನು ದೂಷಿಸಬೇಕೆಂದು ತಿಳಯೋದಿಲ್ಲ. ಬಹುಶಃ ಆ ಮೊದಲಿಗೆ ನಾವು ತಿಂದ ಈರುಳ್ಳಿಗಳನ್ನೇ ದೂಷಿಸಬೇಕು.
ಈರುಳ್ಳಿಗಳು ಸೂಕ್ಷ್ಮರೋಗಾಣುಗಳನ್ನು ಹೀರಿಕೊಳ್ಳುತ್ತವೆ ಹಾಗೂ ಆ ಕಾರಣವಾಗಿಯೇ ಅವು ನೆಗಡಿ ಹಾಗೂ ಫ್ಲೂ ತೊಂದರೆಗಳಿಂದ ನಮಗೆ ಉತ್ತಮ ಸಂರಕ್ಷಣೆ ನೀಡುತ್ತವೆ.
ಮತ್ತು ಅದೇ ಕಾರಣಕ್ಕಾಗಿ, ಹೋಳು ಅಥವಾ ಚೂರು ಮಾಡಲ್ಪಟ್ಟು ಹೆಚ್ಚು ಕಾಲ ಇಟ್ಟ ಈರುಳ್ಳಿಯನ್ನು *ಖಂಡಿತವಾಗಿಯೂ ತಿನ್ನಲೇಬಾರದು.
ಹೆಚ್ಚಿದ ನಂತರ ಹೆಚ್ಚಾಗಿ ಉಳಿದ ಈರುಳ್ಳಿಯು ಬಹಳ ವಿಷಕಾರಿಯಾಗಿರುತ್ತದೆ.
ಯಾವುದೇ ವಿಷಾಹಾರ ಸೇವನೆಯ ವರದಿಯಾದಾಗ, ಅದಕ್ಕೆ ಬಲಿಯಾದವರು ಈರುಳ್ಳಿಯ ಸೇವನೆ ಮಾಡಿದ್ದಾರೆಯೇ, ಮತ್ತು ಆ ಈರುಳ್ಳಿಗಳು ಎಲ್ಲಿಂದ ಸರಬರಾಜು ಆಗಿವೆಯೆಂದು ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈರುಳ್ಳಿಯೇ ಅದಕ್ಕೆ ಕಾರಣ ಆಗಿರುತ್ತದೆ.
ಈರುಳ್ಳಿಗಳು ಸೂಕ್ಷ್ಮರೋಗಾಣುಗಳನ್ನು ಸೆಳೆದುಕೊಳ್ಳುವ ಬೃಹತ್ ಚುಂಬಕಶಕ್ತಿ, ವಿಶೇಷತಃ ಬೇಯಿಸದೇ ಇದ್ದ ಈರುಳ್ಳಿಗಳು.
ಯಾವುದೇ ಕಾರಣಕ್ಕೂ ಕತ್ತರಿಸಿದ ಈರುಳ್ಳಿಯ ಭಾಗವನ್ನು ಹೆಚ್ಚಿನ ಸಮಯ ಇಟ್ಟು ನಂತರದ ಅಡುಗೆಗೆ ಬಳಸಬೇಡಿ ಅಷ್ಟೇ ಅಲ್ಲ, ಕತ್ತರಿಸಿದ ಈರುಳ್ಳಿಯನ್ನು ಭದ್ರವಾಗಿ ಡಬ್ಬದಲ್ಲಿ ಮುಚ್ಚಿ, ಶೀತಕ(ರೆಫ್ರಿಜಿರೇಟರ್)ದಲ್ಲಿ ಇಟ್ಟರೂ ಅದು ಸುರಕ್ಷಿತವಲ್ಲ! ಅದು ಇನ್ನೂ ಹೆಚ್ಚು ವಿಷಕಾರಿಯಾಗಿರುತ್ತದೆ!.
ಹಾಗೆಯೇ, ನಾಯಿಗಳಿಗೆ ಈರುಳ್ಳಿಯನ್ನು ತಿನ್ನಿಸಬೇಡಿ. ಅವುಗಳ ಉದರವು ಈರುಳ್ಳಿಯನ್ನು ಜೀರ್ಣಿಸುವ ಶಕ್ತಿ ಹೊಂದಿರುವದಿಲ್ಲ.
ನೆನಪಿರಲಿ, ಈರುಳ್ಳಿಯನ್ನು ಕತ್ತರಿಸಿಟ್ಟು ಉಳಿಸಿ ಮರುದಿನದ ಅಡುಗೆಗೆ ಬಳಸುವುದು ಅತ್ಯಂತ ಅಪಾಯಕಾರಿಯಾದುದು. ಏಕೆಂದರೆ, ಕೇವಲ ಒಂದು ರಾತ್ರಿಯ ಅವಧಿಯಲ್ಲಿ ಅದು ಅತ್ಯಂತ ವಿಷಕಾರಿಯಾಗಿ ಪರಿಣಮಿಸುತ್ತದೆ! ಏಕೆಂದರೆ, ಅದು ಅತ್ಯಂತ ಅಪಾಯಕಾರಿಯಾದ ಉದರ ದೋಷಗಳನ್ನು ಮಾಡುವಂತಹ ವಿಷಕಾರಿ ಸೂಕ್ಷ್ಮಾಣುಗಳನ್ನು ಸೃಷ್ಟಿಸಿ, ಹೆಚ್ಚಿನ ನಿರ್ನಾಳ ಗ್ರಂಥಿಗಳ ಸ್ರಾವಕ್ಕೆ ಮೂಲವಾಗಿ, ಆಹಾರ ವಿಷಮಯಕ್ಕೂ ಕಾರಣವಾಗುತ್ತದೆ.
Subscribe , Follow on
Facebook Instagram YouTube Twitter WhatsApp