-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 18

ನನಗೋಸ್ಕರ ಕಾಯುವವರಿಗೆ ನಾನು ಸಿಗದೆ ಇರಬಹುದು ....
ಆದ್ರೆ ನನ್ನನ್ನು ನಂಬಿದವರಿಗೆ ನಾನು ಯಾವತ್ತು ಮೋಸ ಮಾಡಿಲ್ಲ.. ನಾನು ಬೇಕು ಅನ್ನುವವರಿಗಿಂತ ನಾನೇ ಬೇಕು ಅನ್ನುವವರು ಮಾತ್ರ ನನ್ನೆ ಮುಖ್ಯ ...

*******

ನಮ್ಮವರು ಅಂದು ಕೊಂಡವರೆಲ್ಲ ನಮ್ಮ ಜೊತೆ ಎಲ್ಲಾ ಸಮಯದಲ್ಲಿ ಒಂದೇ ತರ ಇರ್ತಾರೆ ಅಂದುಕೊಳ್ಳೊದು ನಮ್ಮ ತಪ್ಪು.
ಈ ಪ್ರಪಂಚದಲ್ಲಿ ಸಮಯಕ್ಕಿಂತ ವೇಗವಾಗಿ ಬದಲಾಗೋದು ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು

*******

ನಿಮ್ಮೊಳಗಿನ ಕೆಡಕು ಹೊರಬರುವವರೆಗೆ ಜನ ನಿಮ್ಮನ್ನು ಪ್ರಚೋದಿಸುತ್ತಾರೆ. ಆಮೇಲೆ ಅದೇ ಕೆಡುಕನ್ನು ಬಳಸಿ ತಾವೆಷ್ಟು ಮುಗ್ಧರೆಂದು ಸಾಬೀತುಪಡಿಸುತ್ತಾರೆ

*******

ಒಂದು ಹಂತದವರೆಗೆ ನೋವು ಸಹಿಸಿದ ನಂತರ, ಮನುಷ್ಯ ಮೌನವಾಗುತ್ತಾನೆ. ನಂತರ ಯಾರನ್ನು ದೂಷಿಸುವುದೂ ಇಲ್ಲ, ಯಾರಿಂದ ನಿರೀಕ್ಷಿಸುವುದು ಇಲ್ಲ.

*******

ಒಂದು ಎಲೆ ಕೆಳಗೆ ಬೀಳುತ್ತಾ ಹೇಳಿತು ಈ ಜೀವನ ಶಾಶ್ವತವಲ್ಲ ಅಂತ ಒಂದು ಹೂವು ಅರಳುತ್ತಾ ಹೇಳಿತು ಬದುಕುವ ಒಂದು ದಿನವಾದ್ರೂ ಗೌರವವಾಗಿ ಜೀವಿಸು ಅಂತ ಒಂದು ಮರ ತಣ್ಣಗೆ ಹೇಳಿತು ತಾನು ಕಷ್ಟದಲ್ಲಿದ್ದು ಇತರರಿಗೆ ಸುಖವನ್ನ ಕೊಡು ಅಂತ ಒಂದು ಹೃದಯ ನಗುತ್ತಾ ಹೇಳಿತು ಎಲ್ಲರ ಮನಸಲ್ಲಿ ಒಳ್ಳೆಯ ಸ್ಥಾನವನ್ನ ಸಂಪಾದಿಸು ಅಂತ...

*******

Kannada subhashitha - ಕನ್ನಡ ಸುಭಾಷಿತ ಸಂಗ್ರಹ 18

 

ನಿಮಗೆ ಕಷ್ಟ ತಂದ ಸಂದರ್ಭಗಳನ್ನ ಮರೆತುಬಿಡಿ,
ಆದರೆ ಅದರಿಂದ ಕಲಿತ ಪಾಠವನ್ನ ಎಂದಿಗೂ ಮರೆಯದಿರಿ.
ಎಲ್ಲಾ ಕಷ್ಟಗಳಿಗೂ ಸಮಸ್ಯೆಗಳಿಗೂ ಎರಡು ಔಷದಿಗಳಿವೆ..
ಒಂದು ದುಡಿಮೆ , ಇನ್ನೊಂದು ತಾಳ್ಮೆ..!!

*******

ದುರ್ಬಲರಾದವರು ಮುಯ್ಯಿ ತೀರಿಸಿಕೊಳ್ಳಲು ಯೋಚಿಸುತ್ತಾರೆ. ಗಟ್ಟಿ ಮನಸ್ಸಿನವರು ಕ್ಷಮಿಸುತ್ತಾರೆ. ಬುದ್ಧಿವಂತರಾದವರು ಘಟನೆಮತ್ತು ಅದಕ್ಕೆ ಕಾರಣರಾದವರನ್ನು ನಿರ್ಲಕ್ಷಿಸುತ್ತಾರೆ. ಈ ಮೂವರಲ್ಲಿ ನೀವೇನಾಗಬೇಕುಎಂಬುದನ್ನು ನೀವೇ ನಿರ್ಧರಿಸಬೇಕು

*******

ನಿಮ್ಮ ಗುರಿ ಏನೆಂದು  ಪ್ರತಿ ಒಬ್ಬರಿಗೂ ಹೇಳುವ ಅವಶ್ಯಕತೆಯಿಲ್ಲ , ನೀವು  ಸೇರಿದಮೇಲೆ ಅವರೇ ನಿಮ್ಮ ಬಳಿ  ಬರುವರು

*******

ಜೀವನವೆಂದರೆ ಬಗೆಹರಿಸಬೇಕಾದ ಸಮಸ್ಯೆಯಲ್ಲ,  ಅನುಭವವಿಸಬೇಕಾದ ವಾಸ್ತವ.

*******

ಚಿನ್ನದ ಬಿಲ್ಲೆಯ ಮೇಲೆ “ಇದು ಚಿನ್ನ” ಎಂದು ನಮೂದಿಸಬೇಕೆಂದೇನಿಲ್ಲ. ಅದು ಚಿನ್ನವೇ ಆಗಿದ್ದರೆ ಅಕ್ಕಸಾಲಿಗ ಒಡ್ಡುವ ಪರೀಕ್ಷೆಗಳಲ್ಲಿ ಅದು ಜಯಿಸಿಯೇ ಜಯಿಸುತ್ತದೆ. ಕಾಗೆ ಬಂಗಾರವಾಗಿದ್ದರೆ ಬೆಂಕಿಯಲ್ಲಿ ಹಾಕಿದಾಗಲೇ ಸುಟ್ಟು ಕರಕಲಾಗುತ್ತದೆ. ಗುಣಗಳೂ ಅಷ್ಟೇ... 

*******

ಜಗತ್ತಿನ ಬಹುತೇಕ ಸಮಸ್ಯೆಗಳು ಪರಿಹಾರವಾಗುವುದು ಮಾತಿನಿಂದ.
ಯಾಕೆಂದರೆ ಬಹುತೇಕ ಸಮಸ್ಯೆ ಉದ್ಭವವಾಗಿರುವುದೇ ಮಾತಿನಿಂದ.
ಸಮಸ್ಯೆಯ ಮೂಲ ಮತ್ತು ಅಂತ್ಯ ಮಾತೇ ಆಗಿರುವುದರಿಂದ ಮಾತನ್ನು ಹೇಗೆ ನಾವು ಬಳಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ

*******

ನಾವು ನಡೆಯುವ ದಾರಿ ನ್ಯಾಯ,ನೀತಿ,ಧರ್ಮಗಳೆಂಬ ರಾಜಮಾರ್ಗವಾಗಿದ್ದರೆ ಯಾರಿಗೂ ತಲೆ ಬಾಗಿಸುವ ಪ್ರಮೇಯ ಜೀವನದಲ್ಲಿ ಬಾರದು. ಅಹಂಕಾರದಲ್ಲಿ ತಾನು ನಡೆದಿದ್ದೆ ದಾರಿ ಎಂದು ಭಾವಿಸಿದರೆ ಮುಂದೆ ಎಲ್ಲರೆದುರು ತಲೆ ಬಾಗಿಸುವ ಕಾಲ ಬರಬಹುದು

*******

ಜೀವನದಲ್ಲಿ ಗಟ್ಟಿಯಾಗಿ ನಿಲ್ಲಲು ಹೃದಯವನ್ನು ಕಲ್ಲಾಗಿಸಬೇಕು. ಮೃದು ಮನದ ಮೇಲೆ ಆಗಾಗ ಮೃಗದ ದಾಳಿಯಾಗುತ್ತಲಿರುತ್ತದೆ. ಗಟ್ಟಿತನವೇ ಗೆಲುವು. ಅಲ್ಲವೇ

*******

ನಮ್ಮ ಸಾಧನೆಯ ನಂತರ ನಮ್ಮ ಜೊತೆ ನಿಂತವರೆಲ್ಲಾ ನಮ್ಮ ಹಿತೈಷಿಗಳಲ್ಲ.
ಅದರಲ್ಲಿ ಅವಕಾಶವಾದಿಗಳೂ ಇರುತ್ತಾರೆ.

ನಮ್ಮ ಸೋಲಿನ ನಂತರ ನಮ್ಮ ಜೊತೆ ನಿಂತವರು ಮಾತ್ರ ಹಿತೈಷಿಗಳೇ ಆಗಿರುತ್ತಾರೆ.
ಅವರಲ್ಲಿ ಸಾಧನೆ,ಸೋಲಿಗಿಂತಲೂ ನಮ್ಮಲ್ಲಿನ ಪ್ರೀತಿ ಹೆಚ್ಚಿರುತ್ತದೆ.

*******

ಬರೆದಿದ್ದನ್ನು ಅಳಿಸಬಹುದು. ಆದರೆ ಆಡಿದ ಮಾತನ್ನು ಅಳಿಸಿ ಹಾಕಲು ಆಗುವುದಿಲ್ಲ. ಆದ್ದರಿಂದ ಮಾತನ್ನು ಆಡುವಾಗ ಎಚ್ಚರವಿರಲಿ. ಅದರಲ್ಲೂ ಸಿಟ್ಟು ಬಂದಾಗ ಮಾತಾಡಲೇ ಬಾರದು. ಏನು ಮಾತಾಡುತ್ತೇವೆಂಬುದೇ ಗೊತ್ತಿರುವುದಿಲ್ಲ

*******

ಖುಷಿಯಾಗಿದ್ದೀನಿ ಅನ್ನುವದು ಭ್ರಮೆ, ಖುಷಿಯಾಗಿರುತ್ತೇನೆ ಅನ್ನುವದು ಕಲ್ಪನೆ,
ಹೇಗಿದ್ದರೂ ಬದುಕುತ್ತಿರುವೆನು ಅನ್ನುವದು ವಾಸ್ತವ 

*******

Root cause of all problem is, we have doubts in our faith and faith in our doubts.

*******

ನಮಗೆ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ನಲ್ಲಿ ತುಂಬಾ ಜನ ಸ್ನೇಹಿತರಿರಬಹುದು, ಆದರೆ ನಮಗೆ ಯಾವ ರೀತಿಯ ಸ್ನೇಹಿತರು ಬೇಕು ಅಂದ್ರೆ ನಮ್ಮ ಫೇಸ್ ನ ಬುಕ್ ನ ರೀತಿ ಓದುವವರು ನಮ್ಮ ನೋವು ನಲಿವುಗಳನ್ನು ತಿಳಿಯುವವರು ಮತ್ತು ನಾವು ಬೇಸರದಲ್ಲಿದ್ದಾಗ ವಾಟ್ಸ್ ಅಪ್ ಎಂದು ಕೇಳಿ ಸಮಧಾನ ಮಾಡುವಂತಹ ಸ್ನೇಹಿತರು ಬೇಕು. 

*******

ಜೀವನದಲ್ಲಿ ನೀನು ನಿನಗೆ ಏನು     ಮಾಡುತಿಯೋ,ಅಂತ್ಯದಲ್ಲಿ ಅದು ನಿನ್ನೊಂದಿಗೆ ಕಳೆದುಹೋಗುತ್ತದೆ...!

ಅದೇ ನೀನು ಬೇರೆಯಾವರಿಗಾಗಿ ಕೆಲಸ ಮಾಡುತಿಯೋ ಆದು ನಿನ್ನ ನೆನಪಾಗಿ ಈ ಜಗತ್ತಿನಲ್ಲಿಯೇ ಉಳಿಯುತ್ತದೆ.

*******

ಸಮುದ್ರ ಎಂದಿಗೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗಿಯೇ ನೀರು ಅಲ್ಲಿಗೆ ನೀರು ಅಲ್ಲಿಗೆ ಹರಿದು ಬರುತ್ತದೆ. ಅದೇ ರೀತಿ ಯಶಸ್ಸು ಮತ್ತು ಕೀರ್ತಿಗಳು ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದೆ ಆದಲ್ಲಿ ಅವು ನಮ್ಮನ್ನು ಹಿಂಬಾಲಿಸಿ ಬರುತ್ತವೆ.

*******

ಸಮಯಕ್ಕೆ ದುಡ್ಡಿಗಿಂತ ಹೆಚ್ಚು ಮೌಲ್ಯವಿದೆ,  ದುಡ್ಡು ಎಷ್ಟು ಬೇಕಾದರೂ ಸಂಪಾದಿಸಬಹುದು, ಆದರೆ ಸಮಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.  

*******

ಜೀವನವೆಂದರೆ ಕೇವಲ ಒಂದು ಕತೆಯಲ್ಲ.ಅದು ಅನೇಕ ಕತೆ, ಉಪಕತೆ ಹಾಗೂ ತಿರುವುಗಳನ್ನು ಹೊಂದಿರುವ ಕತೆಗಳ ಸಮೂಹ ಎಂದು ಹೇಳಬಹುದು.

*******

ನಾವೆಲ್ಲಾ ಸದಾ ಆಸ್ತಿ ಮಾಡುವ ಚಿ0ತೆ ಮಾಡುತ್ತೇವೆ ಆದರೆ ಆ ಆಸ್ತಿ ಹೇಗಿರಬೇಕು ಎ0ಬುದನ್ನು ಯೋಚನೆ ಮಾಡುವುದಿಲ್ಲಾ. ಹಾಗಾದರೆ ಈ ಕೆಳಗೆ ಬರೆದಿರುವುದನ್ನು ಓದಿ ಆಳವಡಿಸಿ ಆನ0ದಮಯವಾಗಿಸಿ ಜೀವನವನ್ನು. "ಅಮೂಲ್ಯ ಆಸ್ತಿ"

1 ಒಳ್ಳೆಯ ನಡತೆ ಮನುಷ್ಯನ ಆಸ್ತಿ.

2 ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.

3 ಒಳ್ಳೆಯ ಗುಣ ಮನಸ್ಸಿನ ಆಸ್ತಿ.

4 ಒಳ್ಳೆಯ ಸಂಭಂದ ಜೀವನದ ಆಸ್ತಿ.

5 ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.

6 ಒಳ್ಳೆಯ ಪ್ರೀತಿ ಹೃದಯದ ಆಸ್ತಿ.

7 ಒಳ್ಳೆಯ ಆಹಾರ ದೇಹದ ಆಸ್ತಿ.

8 ಒಳ್ಳೆಯ ಪುಸ್ತಕ ಜ್ಞಾನದ ಆಸ್ತಿ.

9 ಒಳ್ಳೆಯ ಗುರು ವಿಶ್ವದ ಆಸ್ತಿ.

10 ಒಳ್ಳೆಯ ನಗು ಆರೋಗ್ಯದ ಆಸ್ತಿ.

11 ಒಳ್ಳೆಯ ಮಾನವೀಯತೆ ಸಮಾಜದ ಆಸ್ತಿ.

ಇವೇ ನಮ್ಮ ನಿಮ್ಮೆಲ್ಲರ ಆಸ್ತಿಯಾಗಿರಲಿ ಎಂದು ಪ್ರಾರ್ಥಿಸೋಣ.

*******

ಪ್ರತಿಯೊಂದು ಕಷ್ಟವೂ ಅನುಭವ ನೀಡುತ್ತದೆ
ಪ್ರತಿಯೊಂದು ಅನುಭವವೂ ವ್ಯಕ್ತಿಯನ್ನು ಬದಲಾಯಿಸುತ್ತದೆ. 

*******

ಅನುಮಾನ ಮತ್ತು ಅಹಂಕಾರ ಇವೆರಡು ಭಯಂಕರವಾದ ಮಾನಸಿಕ ರೋಗಗಳು. ಈ ರೋಗ ಬಂದವರು ತಾವೂ ಸುಖಪಡುವುದಿಲ್ಲ ಹಾಗೂ ಇತರರನ್ನು ಸಹ ಸುಖಪಡಲು ಬಿಡುವುದಿಲ್ಲ.

*******

ನೀರಿನಿಂದ  ಕಲಿಯಬೇಕಾದ  ಎರಡು ಅಂಶಗಳು ಏನೆಂದರೆ, ಸಂದರ್ಭಕ್ಕೆ  ಅನುಗುಣವಾಗಿ  ಒಗ್ಗಿಕೊಳ್ಳುವುದು,ಇನ್ನೊಂದು ನಮ್ಮ ದಾರಿ ನಾವೇ ಕಂಡುಕೊಳ್ಳುವುದು.

*******


Terms | Privacy | 2024 🇮🇳
–>