-->

ಗಣ ರಾಜ್ಯೋತ್ಸವದ ಕವನ , ಕವಿ ಮಿತ್ರ ಕುಣಿಗಲ್ ದಿವಾಕರ್

ರಕ್ತ ಬಲಿದಾನಗಳಿಂದ_ ಸ್ವಾತಂತ್ರ್ಯ ಬಂದಾಯ್ತು.
ರಾಜ್ಯ, ರಾಜ್ಯಗಳು ಸೇರಿ_ ಗಣ ರಾಜ್ಯ ವಾಯ್ತು.
ಬೇಧ ಭಾವಗಳೆಲ್ಲ _ ಪಕ್ಕಕ್ಕೆ ಸರಿಸಿ.
ಬಲಿಷ್ಟ ಭಾರತದ_ ಭಾವುಟವ ನಾರಿಸಿ.

ಜಾತಿ, ಧರ್ಮ,ಭಾಷೆಗಳು_ ಯಾವುದೇ ಇರಲಿ.
ಭಾರತೀಯರೆಂಬ_ ಒಗ್ಗಟ್ಟು ಇರಲಿ.
ಸಮೃದ್ಧ ಭಾರತದ_ ಕಲ್ಪನೆ ಇರಲಿ.
ಸದ್ಭಾವ ನೆಡೆಯಲ್ಲಿ _ ನಿಸ್ವಾರ್ಥ ವಿರಲಿ.

ದೀನ ದಲಿತರ ಬಗ್ಗೆ_ ಅನುಕಂಪ ವಿರಲಿ.
ರೈತ, ಸೇನಾನಿಗಳ ಬಗ್ಗೆ_ ಕಳ ಕಳಿ ಇರಲಿ.
ಸ್ತ್ರೀಯರಲಿ , ಸರಿಸಮದ_ ಸಮಾನತೆ ಇರಲಿ.
ಭಾರತಾಂಬೆಯ ಸುತೆಯೆಂಬ_ ಗೌರವ ವಿರಲಿ.





ಕಚ್ಚಾಟ , ಕಿತ್ತಾಟ_ ದೇಶಕ್ಕೆ ಮಾರಕ.
ಪ್ರೀತಿ ಪ್ರೇಮ ಸ್ನೇಹವೇ_ ಭದ್ರತೆಗೆ ಪೂರಕ.
ಸಂವಿಧಾನದ ಚೌಕಟ್ಟು_ ಮನದಲ್ಲಿ ಇರಲಿ.
ಭಾರತಾಂಬೆಯ ಚರಣಕ್ಕೆ _ ಭಕ್ತಿ ಕುಸುಮಗಳಿರಲಿ.

ಜಗದಲ್ಲಿ ಕಂಗೊಳಿಸಿ_ ಬೆಳಕ ಚೆಲ್ಲೋಣ.
ಎಲ್ಲರಾ ಮನಗೆದ್ದು_ ಕೀರ್ತಿ ಗಳಿಸೋಣ.
ಶ್ವೇತ ವರ್ಣದ ದ್ವಜಕೆ_ ಶಿರ ಬಾಗಿ ನಡೆಯೋಣ.
" ವಿಶ್ವ ಶಾಂತಿಯ" ಬಯಸಿ_ ಹಾರೈಸಿ ಬಾಳೋಣ,ಹಾರೈಸಿ ಬಾಳೋಣ

- ಕವಿ ಮಿತ್ರ ಕುಣಿಗಲ್ ದಿವಾಕರ್

–>