ಬ್ರಾಹ್ಮೀಮುಹೂರ್ತ ಸ್ನಾನ ಮಾಡುವ ಆದರ್ಶ ಸಮಯವಾಗಿದೆ. ಆದರೆ ಇತ್ತೀಚಿನ ಕಾಲದಲ್ಲಿ ಆ ಸಮಯದಲ್ಲಿ ಸ್ನಾನ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಹೀಗೆ ಸ್ನಾನ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಸೂರ್ಯೋದಯದ ನಂತರ ಎಷ್ಟು ಬೇಗನೇ ಸಾಧ್ಯವಿದೆಯೋ ಅಷ್ಟು ಬೇಗನೇ ಸ್ನಾನ ಮಾಡಬೇಕು.
ಮಧ್ಯಾಹ್ನದ ಸಮಯದಲ್ಲಿ ಸ್ನಾನವನ್ನು ಮಾಡುವುದಕ್ಕಿಂತ ಬೆಳಗ್ಗಿನ ಸಮಯದಲ್ಲಿಯೇ ಸ್ನಾನ ಮಾಡಬೇಕು ದೇಹವನ್ನು ಸ್ಪರ್ಶಿಸುವ ಆಪತತ್ತ್ವದ ಲಹರಿಗಳ ಸಹಾಯದಿಂದ ಬಾಹ್ಯ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳನ್ನು ದೇಹದಿಂದ ಗ್ರಹಣ ಮಾಡುವುದು : ಬೆಳಗ್ಗಿನ ಸಮಯದಲ್ಲಿ ಸ್ನಾನವನ್ನು ಮಾಡುವುದು ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಸಮಯದಲ್ಲಿ ವಾಯುಮಂಡಲವು ಸಾತ್ತ್ವಿಕ ಲಹರಿಗಳಿಂದ ತುಂಬಿರುತ್ತದೆ. ನೀರಿನ ಮಾಧ್ಯಮದಿಂದ ದೇಹವನ್ನು ಸ್ಪರ್ಶಿಸುವ ಆಪತತ್ತ್ವದ ಲಹರಿಗಳ ಸಹಾಯದಿಂದ ದೇಹವು ಬಾಹ್ಯ ವಾಯುಮಂಡಲದಲ್ಲಿನ ಲಹರಿಗಳನ್ನು ಗ್ರಹಿಸಲು ಅತ್ಯಂತ ಸಂವೇದನಾಶೀಲವಾಗುವುದರಿಂದ ತನ್ನಿಂದತಾನೇ ದೇಹದಿಂದ ಬಾಹ್ಯ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳು ಗ್ರಹಿಸಲ್ಪಡುತ್ತವೆ.
ಆದರೆ ಇಂದಿನ ಕಲಿಯುಗದಲ್ಲಿ ಎಲ್ಲವೂ ವಿರುದ್ಧವಾಗಿ ನಡೆಯುತ್ತದೆ, ಹೆಂಗಸರು ಬೆವರಿಳಿಯುತ್ತದೆ ಎಂದು ಮೊದಲು ಮನೆಕೆಲಸಗಳನ್ನು ಮುಗಿಸಿ ಅನಂತರ ಸ್ನಾನ ಮಾಡಿ ಕೊನೆಗೆ ಜಡೆ ಹೆಣೆದುಕೊಳ್ಳುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಸಂಚಾರವು ಹೆಚ್ಚಾಗುವುದರಿಂದ ಮತ್ತು ಸ್ನಾನದ ಸಮಯದಲ್ಲಿ ದೇಹವು ಬಾಹ್ಯ ವಾಯುಮಂಡಲದಲ್ಲಿನ ಲಹರಿಗಳನ್ನು ಗ್ರಹಿಸಲು ಸಂವೇದನಾಶೀಲವಾಗುವುದರಿಂದ ಅದು ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳನ್ನೇ ಗ್ರಹಿಸುತ್ತದೆ ಮತ್ತು ಈ ರೀತಿ ದೇಹದ ಬಾಹ್ಯ ಶುದ್ಧಿಯಾದರೂ ಅಂತಃಶುದ್ಧಿಯಾಗುವುದಿಲ್ಲ.
ರಾತ್ರಿ ಸ್ನಾನ ಮಾಡುವ ಬದಲು ಬೆಳಗ್ಗೆ ಸ್ನಾನ ಮಾಡಬೇಕು.
ಬೆಳಗ್ಗಿನ ಸಮಯದಲ್ಲಿ ಸ್ನಾನವನ್ನು ಮಾಡುವುದರಿಂದ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಸಾತ್ತ್ವ್ವಿಕತೆಯು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿ ದೀರ್ಘಕಾಲದವರೆಗೆ ಉಳಿಯುತ್ತದೆ ಮತ್ತು ರಾತ್ರಿ ಸಮಯದಲ್ಲಿ ಸ್ನಾನವನ್ನು ಮಾಡುವುದರಿಂದ ಅದು ಸ್ವಲ್ಪ ಸಮಯದವರೆಗೆ ಮಾತ್ರ ಉಳಿಯುತ್ತದೆ : ಬೆಳಗ್ಗಿನ ಸಮಯವು ಸಾತ್ತ್ವಿಕವಾಗಿರುವುದರಿಂದ ಬೆಳಗ್ಗಿನ ಸಮಯದಲ್ಲಿ ಸ್ನಾನವನ್ನು ಮಾಡುವುದರಿಂದ ದೇಹಗಳ ಸಾತ್ತ್ವಿಕತೆಯು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿ ದೀರ್ಘಕಾಲದವರೆಗೆ ಉಳಿಯುತ್ತದೆ. ರಾತ್ರಿಯ ಸಮಯವು ತಮೋಗುಣಿ ಆಗಿರುವುದರಿಂದ ಆ ಸಮಯದಲ್ಲಿ ಸ್ನಾನವನ್ನು ಮಾಡುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹಗಳ ಸಾತ್ತ್ವಿಕತೆಯು ಕಡಿಮೆ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಮತ್ತು ಉಳಿದುಕೊಳ್ಳುವ ಕಾಲಾವಧಿಯೂ ಅಲ್ಪವಾಗಿರುತ್ತದೆ. ಆದುದರಿಂದ ಜೀವಕ್ಕೆ ಸ್ನಾನದ ಲಾಭವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
Subscribe , Follow on
Facebook Instagram YouTube Twitter X WhatsApp