-->

ನಮ್ಮ ಕನಸಿನ ಶಾಲೆ , ಶ್ರೀ ಮುತ್ತು ಯ.ವಡ್ಡರ

 


ಯಾರಾದರೂ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಮರಳಿ ಅವರಿಗೆ ಶಾಲೆ ಬಿಟ್ಟು ಹೋಗಲು ಮನಸ್ಸು ಆಗಬಾರದು ಅಂತಹ ಶಾಲೆ ನಮ್ಮದಾಗಬೇಕು.

ಬೇರೆ ಬೇರೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಮ್ಮ ಶಾಲೆಗೆ ಭೇಟಿ ನೀಡುವಂತಾಗಬೇಕು.

 ಒಂದನೇ ತರಗತಿಯ ವಿದ್ಯಾರ್ಥಿಗಳ ಪ್ರವೇಶಾತಿಗೆ ಪಾಲಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗಬೇಕು.

 ನಮ್ಮ ಶಾಲೆಗೆ ತಾಲೂಕು ಮಟ್ಟದ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ರಾಷ್ಟ್ರಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಬರುವಂತಾಗಬೇಕು.

ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ರಾಷ್ಟ್ರಪತಿಯಾದರು, ಹಾಗೆಯೇ ರಾಷ್ಟ್ರಪತಿಯವರೇ ನಮ್ಮ ಶಾಲೆ ಬಗ್ಗೆ ಹೊಗಳಬೇಕು ಸಾಧ್ಯವಾದರೆ ಒಮ್ಮೆ ಬಂದು ಭೇಟಿಯಾಗುವಂತಾಗಬೇಕು.

 ಇದು ಜ್ಞಾನ ದೇಗುಲ ಕೈಮುಗಿದು ಒಳಗೆ ಬಾ ಇದು ಕೇವಲ ಗೋಡೆಬರಹ ಮಾತ್ರ ಆಗಬಾರದು ನಿಜವಾದ ದೇವಾಲಯ ಆಗಬೇಕು.

 ನಮ್ಮ ಶಾಲೆಯಲ್ಲಿ ಕಲಿತ ಮಗು ನಾವು ಅದೇ ಶಾಲೆಯಲ್ಲಿ ಇರುವಾಗಲೇ ನಮ್ಮ ಶಾಲೆಗೆ ಸಾಧಕನಾಗಿ ಒಂದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಬೇಕು.

ಕೆಲವು ವರ್ಷಗಳ ನಂತರ ನಮ್ಮ ಶಾಲೆ ಒಂದು ಪ್ರಸಿದ್ಧ ವಸ್ತು ಸಂಗ್ರಹಾಲಯ ಆಗಬೇಕು.

 ಶಾಲೆಯ ಗ್ರಂಥಾಲಯದಲ್ಲಿ ಕೆಲವು ವರ್ಷಗಳ ನಂತರ ಸಾಧಕರ ಪುಸ್ತಕಗಳು ಇರಬೇಕು ಆ ಪುಸ್ತಕಗಳ ಪರಿಚಯದಲ್ಲಿ ನಮ್ಮ ಹಳೆ ವಿದ್ಯಾರ್ಥಿಗಳ ಆತ್ಮಕಥನಗಳು ಜೀವನ ಚರಿತ್ರೆಗಳು ಇರುವಂತಾಗಬೇಕು.

ನಮ್ಮ ಶಾಲೆಯಿಂದ ಊರಿನ ಘನತೆ ಗೌರವ ಹೆಚ್ಚಾಗುವಂತಿರಬೇಕು.

ನಮ್ಮ ಶಾಲೆಯ ಎಲ್ಲಾ ಶಿಕ್ಷಕ ಬಳಗದವರು ಒಂದೇ ಕುಟುಂಬದ ಸದಸ್ಯರ  ಭಾವನೆ ಹೊಂದಿರಬೇಕು.
ಶಾಲೆ ದೇವಾಲಯ ಮಗುವೇ ದೇವರು ಶಿಕ್ಷಕರೇ ಅರ್ಚಕರು ಎಂಬ ನುಡಿ ಅನ್ವರ್ಥವಾಗಬೇಕು

ಸಂಜೆಯ ಗಂಟೆ ಬಯಸುವ ಮಕ್ಕಳು ಮುಂಜಾನೆ ಗಂಟೆಯ ಸದ್ದಿಗೂ ಮುನ್ನ ಸಿದ್ಧರಾಗಿ ಬಂದಿರಬೇಕು
ಶಾಲೆಯ ರಜೆಗಳಿಗಿಂತ ಶಾಲಾದಿನಗಳು ಮಕ್ಕಳಿಗೆ ಮುದ ನೀಡುವ ಶಾಲೆ ನಮ್ಮದಾಗಬೇಕು

ನಮ್ಮ ಮಕ್ಕಳು ಓದುವ ಶಾಲೆ ಸರ್ವತೋಮುಖ ಏಳಿಗೆಯಾಗಲು ಶಿಕ್ಷಕ- ಪೋಷಕರ ಬದ್ಧತೆಯ ಸಹಾಯಹಸ್ತವಿರಬೇಕು
ಶಾಲೆಯ ಗೋಡೆ,ಮೈದಾನ,ಕೈತೋಟಗಳೂ ಸಹ ಕಲಿಕೆಯ ಆಕರ್ಷಕ ತಾಣವಾಗಬೇಕು

ದೇವಸ್ಥಾನಕ್ಕೆ ಸಾಲುಗಟ್ಡಿ ಹೋಗುವ ಶಾಲೆಗಳ ಅಂಗಳದಲ್ಲಿ ಸೇರಿ ಅಭಿವೃದ್ಧಿಗೆ ನಾಂದಿಯಾಗಬೇಕು

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      



Terms | Privacy | 2024 🇮🇳
–>