ನವಮಾಸ ಹೊತ್ತು ನೋವುಂಡು ಹೆತ್ತು ಬೆಳೆಸಿರುವ ತಾಯಿಗಾಗಿ ಓದು
ಬೆವರು ಹರಿಸಿ,ಹರಕು ಬಟ್ಟೆ ತೊಟ್ಟು ನಿನಗೆ ಕೋಟು ತೊಡಿಸಿದ ತಂದೆಗಾಗಿ ಓದು
ಪ್ರೀತಿಯಿಂದ ಹರಸಿ ಬೇಕಾದ್ದು ಕೊಡಿಸಿ ಹಾರೈಸಿದ ಅಜ್ಜನಿಗಾಗಿ ಓದು
ಕಥೆ ಹೇಳಿ ಬೆಚ್ಚನೆ ಕೌದಿ ಹೊದಿಸಿ ಜೋಪಾನ ಮಾಡಿದ ಅಜ್ಜಿಗಾಗಿ ಓದು
ನಿನಗಾಗಿ ಕಷ್ಟ ಪಡುವ ಕನಸುಗಾರ ಸಹೋದರನಿಗಾಗಿ ಓದು
ನಿನ್ನ ನೋವು ಆಲಿಸುತ್ತ ಅಂಗಿ ತೊಡಿಸಿ ಬೂಟು ಕಟ್ಟಿದ ಸಹೋದರಿಗಾಗಿ ಓದು
ಅಕ್ಷರ ಕಲಿಸಿ ಬುದ್ಧಿಯ ಬುತ್ತಿ ಕೊಟ್ಟ ಗುರುವಿಗಾಗಿ ಓದು
ಮಾರ್ಗದರ್ಶನ ಮಾಡಿ ಬೆಂಗಾವಲಾದ ಮುಖ್ಯ ಗುರುಗಳಿಗಾಗಿ ಓದು
ಸ್ನೇಹ, ಪ್ರೀತಿ ಹಂಚಿಕೊಂಡ ಸಹಪಾಠಿಗಾಗಿ ಓದು
ಓದಲು ಸ್ಫೂರ್ತಿಯಾದ ಪ್ರತಿಸ್ಫರ್ಧಿಗಾಗಿ ಓದು
ನಿನ್ನ ಫಲಿತಾಂಶಕ್ಕಾಗಿ ಕಾದು ಕುಳಿತಿರುವ ಪತ್ರಿಕೆಗಾಗಿ ಓದು
ನಿನ್ನ ಸಂದರ್ಶನಕ್ಕಾಗಿ ಕಾಯುತ್ತಿರುವ ಮಾಧ್ಯಮಗಳಿಗಾಗಿ ಓದು
ಫಲಿತಾಂಶದಂದು ಸಿಹಿ ಹಂಚಿ ಸಂಭ್ರಮಿಸುವ ಸಂಬಂಧಿಕರಿಗಾಗಿ ಓದು
ನಿಮ್ಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಗಾಗಿ ಓದು
ನಿನಗಾಗಿ ಮೀಸಲಿರುವ ಸನ್ಮಾನದ ಪದಕಕ್ಕಾಗಿ ಓದು
ಹತ್ತು ವರ್ಷಗಳ ನಿನ್ನ ಪರಿಶ್ರಮಕ್ಕಾಗಿ ಓದು
ನೀ ಹುಟ್ಟಿದ ಮನೆಯ ಬೆಳಗುವ ದೀಪವಾಗಲು ಓದು
ನಿನ್ನೂರಿನ ಏಳಿಗೆಯ ಕನಸಿಗಾಗಿ ಓದು
ತಾಯ್ನಾಡು ನುಡಿ ನೆಲಜಲದ ಅರಿವು ಅಭಿಮಾನಕ್ಕಾಗಿ ಓದು
ನಿನ್ನನ್ನೇ ನಂಬಿರುವ ನಿನ್ನ ಆತ್ಮ ವಿಶ್ವಾಸಕ್ಕಾಗಿ ಓದು
ಗೆಲುವಿನ ಶಿಖರವೇರಿ ವಿಜಯಪತಾಕೆ ನೆಡಲು ಓದು..
ಓದು ಉನ್ನತಿಗಾಗಿ,ನೆಮ್ಮದಿಗಾಗಿ,ಗುರಿಸಾಧನೆಗಾಗಿ ಓದು
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484
Subscribe , Follow on
Facebook Instagram YouTube Twitter X WhatsApp