ಪ್ರೀತಿಯಲಿ ಹೃದಯವಂತನಾಗು
ಸ್ನೇಹದಲಿ ಶ್ರೀಮಂತನಾಗು
ಅಧಿಕಾರದಲಿ ಧೀಮಂತನಾಗು
ಜ್ಞಾನದಲಿ ನಿಷ್ಣಾತನಾಗು
ವ್ಯಕ್ತಿತ್ವದಲಿ ಪರಿಪೂರ್ಣನಾಗು
ಭಕ್ತಿಯಲಿ ಪರಿಶುದ್ಧನಾಗು
ನಡತೆಯಲಿ ಬದ್ಧನಾಗು
ಅಡಿಗಡಿಗೆ ಸಿದ್ಧನಾಗು
ನ್ಯಾಯದಲಿ ನೈಜವಾಗು
ಕಾರ್ಯದಲಿ ಪಕ್ವವಾಗು
ಸೇವೆಯಲಿ ನಿಸ್ವಾರ್ಥನಾಗು
ಭಾವದಲಿ ನಿರ್ಮಲನಾಗು
ಸಮಾಜದಲಿ ಸಾತ್ವಿಕನಾಗು
ಸಂಸಾರದಲಿ ಸಮರಸವಾಗು
ಮಾತಿನಲಿ ಪ್ರಾಮಾಣಿಕನಾಗು
ಕೃತಿಯಲಿ ಪಾರದರ್ಶಕವಾಗು
ಪೂಜೆಯಲಿ ನಿಶ್ಚಲನಾಗು
ಧ್ಯಾನದಲಿ ಮಗ್ನನಾಗು
ಊಟದಲಿ ಸರಳನಾಗು
ನೋಟದಲಿ ಶರಣನಾಗು
ಗಳಿಕೆಯಲಿ ಶ್ರಮಿಕನಾಗು
ಉಳಿಕೆಯಲಿ ದಾನಿಯಾಗು
ಹೊಗಳಿಕೆಗೆ ನಿಗರ್ವಿಯಾಗು
ತೆಗಳಿಕೆಗೆ ಮೌನಿಯಾಗು
ನೀನಂದುಕೊಂಡಂತಾಗು
ಸರಿದಾರಿಯ ಪಯಣಿಗನಾಗು
ಏನಾದರೂ ಆಗು ಸತ್ವಭರಿತನಾಗು
ಆಮರಣ ಪರ್ಯಂತ ಮಾನವನಾಗು
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484
Subscribe , Follow on
Facebook Instagram YouTube Twitter X WhatsApp