-->

ಬದುಕಿನ ಅರ್ಥ ನಾನಾರ್ಥ , ಶ್ರೀ ಮುತ್ತು ಯ.ವಡ್ಡರ

 

ಬದುಕಿನ ಅರ್ಥ ನಾನಾರ್ಥ , ಶ್ರೀ ಮುತ್ತು ಯ.ವಡ್ಡರ

ಶಿಕ್ಷಕ ಹೇಳುತ್ತಾನೆ ಬದುಕು ಎಂದರೆ ಪಾಠ
ವಿದ್ಯಾರ್ಥಿ ಹೇಳುತ್ತಾನೆ ಬದುಕು ಎಂದರೆ ಕಲಿಕೆ
ಭಿಕ್ಷುಕ ಹೇಳುತ್ತಾನೆ ಬದುಕು ಎಂದರೆ  ಒಂದು ಹೊತ್ತಿನ ಊಟ

ರೈತ ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ಬೆಳೆ
ಕಲಾವಿದ ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ಪ್ರದರ್ಶನ
ಶ್ರಮಿಕ ಹೇಳುತ್ತಾನೆ ಬದುಕು ಎಂದರೆ  ದಣಿವಾರಿಪ ಅಭಂಗ ನಿದ್ದೆ

ಅನಾಥ ಹೇಳುತ್ತಾನೆ ಬದುಕು ಎಂದರೆ ಒಂದೊಳ್ಳೆಯ ಆಸರೆ
ನೃತ್ಯಪಟು ಹೇಳುತ್ತಾನೆ ಬದುಕು ಎಂದರೆ ರಾಗ ತಾಳಕ್ಕೆ ತಕ್ಕ ಗೆಜ್ಜೆಯ ಹೆಜ್ಜೆ
ಸಾಹಿತಿ ಹೇಳುತ್ತಾನೆ ಬದುಕು ಎಂದರೆ ಒಂದು ಉತ್ತಮ ಬರಹ

ಸ್ವಾರ್ಥಿ ಹೇಳುತ್ತಾನೆ ಬದುಕು ಎಂದರೆ ಸ್ವಂತಸುಖ
ವೈದ್ಯ ಹೇಳುತ್ತಾನೆ ಬದುಕು ಎಂದರೆ   ಉಳಿಸಿಕೊಂಡ ಜೀವ
ಸೈನಿಕ ಹೇಳುತ್ತಾನೆ ಬದುಕು ಎಂದರೆ ದೇಶ

ಸ್ಪರ್ಧಾಳು ಹೇಳುತ್ತಾನೆ ಬದುಕು ಎಂದರೆ ಗೆಲುವು
ಪ್ರಾಮಾಣಿಕ ಹೇಳುತ್ತಾನೆ ಬದುಕು ಎಂದರೆ ಸತ್ಯ
ಸ್ನೇಹಿತ ಹೇಳುತ್ತಾನೆ ಬದುಕು ಎಂದರೆ ಅಚಲ ಗೆಳೆತನ

ಹೆತ್ತವರು ಹೇಳುತ್ತಾರೆ ಬದುಕು ಎಂದರೆ ಮಕ್ಕಳ ಭವಿಷ್ಯ
ಯೋಗಿ ಹೇಳುತ್ತಾನೆ ಬದುಕು ಎಂದರೆ ಆತ್ಮ ಸಾಕ್ಷಾತ್ಕಾರ
ದಾನಿ ಹೇಳುತ್ತಾನೆ ಬದುಕು ಎಂದರೆ  ಸತ್ಪಾತ್ರರಿಗೆ ಒದಗುವ ಸಹಾಯಹಸ್ತ

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

Terms | Privacy | 2024 🇮🇳
–>