-->

ದೇವರಿದ್ದಾನೆ ಒಮ್ಮೆ ಯೋಚಿಸಿ , ಶ್ರೀ ಮುತ್ತು ಯ.ವಡ್ಡರ

 

ದೇವರಿದ್ದಾನೆ ಒಮ್ಮೆ ಯೋಚಿಸಿ , ಶ್ರೀ ಮುತ್ತು ಯ.ವಡ್ಡರ

ಹಸಿದವರಿಗೆ ನೀಡುವ ಅನ್ನದಲ್ಲಿ ದೇವರಿದ್ದಾನೆ
ನೊಂದವರಿಗೆ ನೆರವಾಗುವ ಮಾತಿನಲ್ಲಿ ದೇವರಿದ್ದಾನೆ
ಅಸಹಾಯಕರಿಗೆ ಮಾಡುವ ಸಹಾಯದಲ್ಲಿ ದೇವರಿದ್ದಾನೆ
ಪ್ರಾಮಾಣಿಕತೆಯಿಂದ ಓದುವ ಪುಸ್ತಕದಲ್ಲಿ ದೇವರಿದ್ದಾನೆ

ರೈತನು ನಂಬಿರುವ ಕೃಷಿಯಲ್ಲಿ ದೇವರಿದ್ದಾನೆ
ಪ್ರತಿನಿತ್ಯ ಮಾಡುವ ಸತ್ಕಾರ್ಯದಲ್ಲಿ ದೇವರಿದ್ದಾನೆ
ಕಲ್ಮಶವಿಲ್ಲದ ಪುಣ್ಯ ಕಾರ್ಯದಲ್ಲಿ ದೇವರಿದ್ದಾನೆ
ಸಮಸ್ಯೆಯಲ್ಲಿರುವವರಿಗೆ ಮಾಡುವ ಸಮಾಧಾನ ದೇವರಿದ್ದಾನೆ

ಹಿರಿಯರ ಆಶೀರ್ವಾದದಲ್ಲಿ ದೇವರಿದ್ದಾನೆ
ಉತ್ತಮ ಆಚಾರ ವಿಚಾರದಲ್ಲಿ ದೇವರಿದ್ದಾನೆ
ದೇಶ ಕಾಯುವ ಸೈನಿಕನ ಗುಂಡಿಗೆ ಯಲ್ಲಿ ದೇವರಿದ್ದಾನೆ
ಗುರು ಕಲಿಸುವ ವಿದ್ಯೆಯಲ್ಲಿ ದೇವರಿದ್ದಾನೆ

ತಾಯಿಯ ಮಮತೆಯಲ್ಲಿ ದೇವರಿದ್ದಾನೆ
ತಂದೆಯ ಜವಾಬ್ದಾರಿಯಲ್ಲಿ ದೇವರಿದ್ದಾನೆ
ಬದುಕುವ ಅದರ್ಶದಲ್ಲಿ ದೇವರಿದ್ದಾನೆ
ನಡೆದುಕೊಳ್ಳುವ ಸವಿನಯದಲ್ಲಿ ದೇವರಿದ್ದಾನೆ
ಮುಗ್ಧ ಮಗುವಿನ ಮನಸಿನಲ್ಲಿ ದೇವರಿದ್ದಾನೆ

ತಪ್ತರ ಕಂಬನಿಯಲ್ಲಿ ದೇವರಿದ್ದಾನೆ
ಆಪ್ತರ ಹಂಬಲದಲ್ಲಿ ದೇವರಿದ್ದಾನೆ
ತಟ್ಟುವ ರೊಟ್ಟಿಯಲ್ಲೂ ದೇವರಿದ್ದಾನೆ
ಕಟ್ಟುವ ಬುತ್ತಿಯಲ್ಲೂ ದೇವರಿದ್ದಾನೆ

ತೊಟ್ಟಿಕ್ಕುವ ಹನಿಹನಿ ನೀರಲ್ಲೂ ದೇವರಿದ್ದಾನೆ
ಅಟ್ಟುವ ಅಗ್ನಿಯಲ್ಲೂ ದೇವರಿದ್ದಾನೆ
ನಾಸ್ತಿಕನಿಗೆ ಗುಡಿಯಲ್ಲಷ್ಟೇ ದೇವರಿದ್ದಾನೆ
ಆಸ್ತಿಕನಿಗೆ ಎದೆಗುಡಿಯಲ್ಲೇ ದೇವರಿದ್ದಾನೆ

ಕಾಣದ ದೇವರು ಕಾಯಕದಲ್ಲೇ ಇದ್ದಾನೆ
ಹರಸುವ ದೇವರು ಪ್ರತಿ ಉಸಿರಲ್ಲೇ ಇದ್ದಾನೆ
ಹತ್ತಾರು ಪುಣ್ಯಕ್ಷೇತ್ರಗಳಲ್ಲಿ ನೀ ಹುಡುಕುವ  ದೇವರು
ಹೆತ್ತ ತಂದೆತಾಯಿಗಳ ನಿತ್ಯದ ಉಸಿರು

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

Terms | Privacy | 2024 🇮🇳
–>