Sandalwood updates
ಭಾಗ್ಯ ಫುಡ್ ಬಿಜಿನೆಸ್ಗೆ ಕಲ್ಲು ಹಾಕಿದ ಕನ್ನಿಕಾ; ಲೈಸನ್ಸ್ ಇಲ್ಲವೆಂದು ಬಂದ್ ಮಾಡಿದ ಅಧಿಕಾರಿಗಳು: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಭಾಗ್ಯಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಭಾಗ್ಯ ನಡೆಸುತ್ತಿದ್ದ ಹೋಮ್ ಫುಡ್ ಬಿಜಿನೆಸ್ಗೆ ಲೈಸನ್ಸ್ ಇಲ್ಲವೆಂದು ಅಧಿಕಾರಿಗಳು ಬಂದು ದಾಳಿ ಮಾಡಿ, ಎಲ್ಲವನ್ನೂ ಸೀಜ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ.
ದೊಡ್ಡ ಅವಘಡದಿಂದ ಪಾರಾದ ಮಗ; ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ, ವಿಡಿಯೋ
ಸಿಂಗಾಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಗಾಯಗೊಂಡಿದ್ದ ಪುತ್ರ ಮಾರ್ಕ್ ಶಂಕರ್ ದೊಡ್ಡ ಅಪಾಯದಿಂದ ಪಾರಾಗಿದ್ದಕ್ಕೆ ಪವನ್ ಕಲ್ಯಾಣ್ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. ಮಾರ್ಕ್ ಶಂಕರ್ ಗಂಡಾಂತರದಿಂದ ಪಾರಾಗಿರುವುದಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ, ತಿರುಪತಿಗೆ ಹರಕೆ ರೂಪದಲ್ಲಿ ಮುಡಿ ಕೊಟ್ಟಿದ್ದಾರೆ.
ಪತ್ನಿ ಪದ್ಮಿನಿ ದೇವನಹಳ್ಳಿ ಪ್ರಗ್ನೆನ್ಸಿ ಫೋಟೋಶೂಟ್ನಲ್ಲಿ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ಅಜಯ್ ರಾಜ್ PHOTOS
ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಹರೀಶ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿರುವ ಅಜಯ್ ರಾಜ್ ಇದೀಗ ಅಪ್ಪನಾಗೋ ಖುಷಿಯಲ್ಲಿದ್ದಾರೆ. ಪತ್ನಿ ಪದ್ಮಿನಿ ದೇವನಹಳ್ಳಿ ಇನ್ನೇನು ಶೀಘ್ರದಲ್ಲಿ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಈ ಬೆನ್ನಲ್ಲೇ ಪತ್ನಿಯ ಪ್ರಗ್ನೆನ್ಸಿ ಫೋಟೋಶೂಟ್ನಲ್ಲಿ ಅಜಯ್ ಸಹ ಕಂಡಿದ್ದಾರೆ.
ಪ್ರಕೃತಿ ಮಡಿಲಲ್ಲಿ ʻಪಟಾಕಾʼ ನಭಾ ನಟೇಶ್ ಸುತ್ತಾಟ
ಪ್ರಕೃತಿ ಮಡಿಲಲ್ಲಿ ʻಪಟಾಕಾʼ ನಭಾ ನಟೇಶ್ ಸುತ್ತಾಟ
ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ Bigg Boss Kannada ಖ್ಯಾತಿಯ ನಮ್ರತಾ ಗೌಡ, ಸಿನಿಮಾ ಯಾವುದು, ಏನ್ ಕಥೆ?
ಸ್ಯಾಂಡಲ್ವುಡ್ಗೆ ಬಾಲ ನಟಿಯಾಗಿ ಎಂಟ್ರಿಕೊಟ್ಟಿದ್ದ ನಮ್ರತಾ ಗೌಡ, ಬಳಿಕ ಕಿರುತೆರೆಯಲ್ಲಿ ನಾಯಕಿಯಾಗಿ ಗಮನ ಸೆಳೆದರು. ನಾಗಿಣಿ ಸೀರಿಯಲ್ನಲ್ಲಿ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡು, ಕನ್ನಡಿಗರ ಮನಗೆದ್ದರು. ಅದಾದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿಯೂ ಸ್ಪರ್ಧಿಯಾಗಿ ಫಿನಾಲೆವರೆಗೂ ಇದ್ದರು. ಇದೀಗ ಇದೇ ನಟಿ, ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ.
Vadhu Serial: ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್ ಲಾಯರ್ ಮದುವೆ ಕಥೆ
Vadhu: ಕಲರ್ಸ್ ಕನ್ನಡದಲ್ಲಿ ಡೈವೋರ್ಸ್ ಲಾಯರ್ ಮದುವೆ ಕಥೆ ಪ್ರಸಾರವಾಗಲು ಆರಂಭವಾಗಿ ಇನ್ನು 6 ತಿಂಗಳು ಕೂಡ ಕಳೆದಿಲ್ಲ. ಈಗಾಗಲೇ ಈ ಧಾರಾವಾಹಿ ಮುಕ್ತಾಯದ ಮಾತು ಕೇಳಿಬರುತ್ತಿದೆ. ಹೌದು ‘ವಧು‘ ಧಾರಾವಾಹಿ ಸದ್ಯದಲ್ಲೇ ಅಂತ್ಯವಾಗಲಿದೆ.
ಮಗನ ಹೆಸರಲ್ಲಿ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಲಕ್ಷ ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ PHOTOS
ಟಾಲಿವುಡ್ ನಟ, ರಾಜಕಾರಣಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮಗ ಮಾರ್ಕ್ ಶಂಕರ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
ಸಿನಿಮಾಗಳಲ್ಲಿ ದಕ್ಕದ ಯಶಸ್ಸು, ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ; ಸೀರಿಯಲ್ ನಿರ್ಮಾಣದ ಜೊತೆ, ವಿಶೇಷ ಪಾತ್ರದಲ್ಲಿಯೂ ಮಿಂಚು
Megha Shetty: ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸಿನಿಮಾಗಳಲ್ಲಿ ಹೇಳಿಕೊಳ್ಳದ ಯಶಸ್ಸು ಸಿಗದ ಕಾರಣ, ಇದೀಗ ಧಾರಾವಾಹಿ ನಿರ್ಮಾಣದತ್ತ ಮನಸ್ಸು ಮಾಡಿದ್ದಾರೆ. ಜೊತೆಗೆ ಅತಿಥಿ ಪಾತ್ರದಲ್ಲಿ ನಟನೆ ಕೂಡ ಮಾಡಲಿದ್ದಾರೆ.
KGF Chapter 3: ʻಕೆಜಿಎಫ್ ಚಾಪ್ಟರ್ 2ʼ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷ; ಚಾಪ್ಟರ್ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್
ʻಕೆಜಿಎಫ್ ಚಾಪ್ಟರ್ 2ʼ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್ 14) ಮೂರು ವರ್ಷಗಳಾದವು. ಈ ನಿಮಿತ್ತ ವಿಡಿಯೋ ತುಣುಕೊಂದನ್ನು ಶೇರ್ ಮಾಡಿರುವ ಹೊಂಬಾಳೆ ಫಿಲಂಸ್, ʻಕೆಜಿಎಫ್ ಚಾಪ್ಟರ್ 3ʼ ಬಗ್ಗೆಯೂ ಸಣ್ಣ ಸುಳಿವು ನೀಡಿದ್ದಾರೆ.
Muddhu Sose Serial: ʻಅಣ್ಣಯ್ಯʼನಿಗೆ ಟಕ್ಕರ್ ಕೊಡ್ತಾಳಾ ʻಮುದ್ದು ಸೊಸೆʼ? ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ
ಜೀ ಕನ್ನಡದಲ್ಲಿ ರಾತ್ರಿ 7:30ಕ್ಕೆ ಅಣ್ಣಯ್ಯ ಸೀರಿಯಲ್ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರಿಂದ ಮೆಚ್ಚುಗೆ ಪಡೆದ ಈ ಸೀರಿಯಲ್, ಟಿಆರ್ಪಿ ವಿಚಾರದಲ್ಲಿ ಟಾಪ್ ಸ್ಥಾನದಲ್ಲಿದೆ. ಇದೀಗ ಇದೇ ಟೈಮ್ ಸ್ಲಾಟ್ಗೆ ಮುದ್ದು ಸೊಸೆ ಸೀರಿಯಲ್ ಪ್ರಸಾರ ಆರಂಭಿಸಲಿದೆ.
Credits : HTimes Kannada
Subscribe , Follow on