National news updates
ದೆಹಲಿ ಅಬಕಾರಿ ನೀತಿ ಕೇಸ್; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್
Delhi Excise Policy Case: ದೆಹಲಿ ಅಬಕಾರಿ ನೀತಿ ಕೇಸ್ನಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರೀವಾಲ್ ಅವರ ವಿಚಾರಣೆ ನಡೆಸುವುದಕ್ಕೆ ಇಡಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ.>
ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆ; ಅನುಷ್ಠಾನ ಸಾಧನೆ ತಮ್ಮದೆಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ
US Consulate Bengaluru: ಬೆಂಗಳೂರಿಗರ ಅನೇಕ ವರ್ಷಗಳ ಕನಸು ನನಸಾಗುತ್ತಿದೆ. ಅಮೆರಿಕದ ದೂತಾವಾಸ ಕಚೇರಿ ಬೆಂಗಳೂರಲ್ಲಿ ಮುಂದಿನ ತಿಂಗಳು ಸ್ಥಾಪನೆಯಾಗಲಿದೆ. ಈ ವಿಚಾರ ಖಾತ್ರಿಯಾದ ಕೂಡಲೇ ಸಾಧನೆ ತಮ್ಮದೆಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಶುರುವಾಗಿದೆ.>
ತಮಿಳುನಾಡು ತಿರುಪೋರೂರ್ ಕಂದಸ್ವಾಮಿ ದೇವಾಲಯದ ಕಾಣಿಕೆ ಹುಂಡಿಗೆ ಬಿದ್ದ ಐಫೋನ್, ಆಡಳಿತ ಮಂಡಳಿ ಹೇಳಿದ್ದು ಕೇಳಿ ಭಕ್ತ ಕಂಗಾಲು
iPhone: ದೇವರ ಕಾಣಿಕೆ ಹುಂಡಿಗೆ ಬಿದ್ದದ್ದು ದೇವರಿಗೆ. ವಾಪಸ್ ಕೊಡಿ ಅಂದ್ರೆ ಸಿಗುತ್ತಾ? ಅಂದ್ರೆ ಸಿಗಲ್ಲ ಎಂಬ ಉತ್ತರ ಶತಸಿದ್ಧ. ತಮಿಳುನಾಡು ತಿರುಪೋರೂರ್ ಕಂದಸ್ವಾಮಿ ದೇವಾಲಯದ ಹುಂಡಿಗೆ ಕಾಣಿಕೆ ಹಾಕುವಾಗ ಐಫೋನ್ ಬಿದ್ದು ಹೋಗಿದೆ. ಆಡಳಿತ ಮಂಡಳಿ ಹೇಳಿದ್ದು ಕೇಳಿ ಭಕ್ತ ಕಂಗಾಲಾಗಿರುವ ಘಟನೆ ನಡೆದಿದೆ.>
ಮಧುರೈ: ಸಾರ್ಥಕ ಜೀವಕ್ಕೆ ಸತ್ತ ಮೇಲೂ ಸಂದ ಗೌರವ; ಕುಣಿದು ಕುಪ್ಪಳಿಸಿ 96ರ ಅಜ್ಜಿಗೆ ಅಂತಿಮ ವಿದಾಯ ಹೇಳಿದ ಕುಟುಂಬಸ್ಥರು
ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಕಲ್ಯಾಣ ಸಾವು ಬಯಸಿದ 96 ವರ್ಷದ ವೃದ್ಧೆಯೊಬ್ಬರ ಅಂತಿಮ ಆಸೆಯನ್ನು ಅವರ ಮಕ್ಕಳು ಮತ್ತು 78ಕ್ಕೂ ಹೆಚ್ಚು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ನೆರವೇರಿಸಿದ್ದಾರೆ. ಹೇಗೆ ಅಂತೀರಾ, ಕುಣಿದು ಕುಪ್ಪಳಿಸಿ ಸಾರ್ಥಕ ಜೀವಕ್ಕೆ ಸತ್ತಮೇಲೂ ಗೌರವ ಸಲ್ಲಿಸಿದ್ದಾರೆ. ಈ ವಿಲಕ್ಷಣ ಘಟನೆಯ ವಿವರ ಇಲ್ಲಿದೆ.>
ಅಂಬೇಡ್ಕರ್ ವಿವಾದ; ಅಮಿತ್ ಶಾ ಹೇಳಿಕೆ ವಿಚಾರದ ಪ್ರತಿಭಟನೆ ಗದ್ದಲ, ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲು, ಕೊಲೆ ಯತ್ನದ ಆರೋಪ, 5 ಮುಖ್ಯ ಅಂಶ
Ambedkar Row: ಅಮಿತ್ ಶಾ ಹೇಳಿಕೆ ಮೂಲಕ ಉಂಟಾದ ಅಂಬೇಡ್ಕರ್ ವಿವಾದದ ಪ್ರತಿಭಟನೆ ಗದ್ದಲದಲ್ಲಿ ಬಿಜೆಪಿ ಸಂಸದರು ಗಾಯಗೊಂಡರು. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿದ್ದು, ಅವರ ವಿರುದ್ಧ ಬಿಜೆಪಿ ನಾಯಕರು ಕೊಲೆ ಯತ್ನದ ಆರೋಪ ಹೊರಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದು, 5 ಮುಖ್ಯ ಅಂಶಗಳ ವಿವರ ಇಲ್ಲಿದೆ. >
Dominique Pelicot trial: 50 ಪುರುಷರು, 10 ವರ್ಷಗಳ ಕಾಲ ಅತ್ಯಾಚಾರ; ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿದ ವ್ಯಕ್ತಿಗೆ ಕಠಿಣ ಶಿಕ್ಷೆ
Dominique Pelicot: ತನ್ನ ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿರುವ ವ್ಯಕ್ತಿಯೊಬ್ಬನಿಗೆ ಫ್ರಾನ್ಸ್ ನ್ಯಾಯಾಲಯವು ಫ್ರೆಂಚ್ ಕಾನೂನಿಡಿ ಇರುವ ಗರಿಷ್ಠ ಶಿಕ್ಷೆಯನ್ನು ವಿಧಿಸಿ ಗುರುವಾರ ತೀರ್ಪು ನೀಡಿದೆ. ತನ್ನ ಮಾಜಿ ಪತ್ನಿಯನ್ನು ಅತ್ಯಾಚಾರ ಮಾಡಲು ಆನ್ಲೈನ್ನಲ್ಲಿ ಅತ್ಯಾಚಾರಿಗಳನ್ನು ನೇಮಕ ಮಾಡಿಕೊಂಡಿರುವುದಾಗಿ ಡೊಮಿನಿಕ್ ಪೆಲಿಕಾಟ್ ಒಪ್ಪಿಕೊಂಡಿದ್ದಾನೆ.>
Stock Market Crash: ಷೇರುಪೇಟೆ ಮಹಾಕುಸಿತಕ್ಕೆ ಕಾರಣವೇನು? ಇಂದು ಒಂದೇ ದಿನ 4 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು
Stock Market Crash Today: ಮುಂಬೈ ಷೇರು ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ ಸುಮಾರು 965 ಪಾಯಿಂಟ್ಗಳನ್ನು ಕುಸಿದು 80,000 ಮಟ್ಟಕ್ಕಿಂತ ಕಡಿಮೆಗೆ ತಲುಪಿದೆ. ವಿದೇಶಿ ಬಂಡವಾಳ ಹೂಡಿಕೆಯ ಹೊರಹರಿವು ಹೆಚ್ಚಾಗಿರುವುದು, ಗ್ರಾಹಕ ವಸ್ತುಗಳು, ಬ್ಯಾಂಕಿಂಗ್ ಮತ್ತು ಐಟಿ ಷೇರುಗಳು ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಕೂಡ ಷೇರುಪೇಟೆಯ ಪತನಕ್ಕೆ ಕಾರಣವಾಯಿತು.>
ಅಂಬೇಡ್ಕರ್ ವಿವಾದ; ಸಂಸತ್ನಲ್ಲಿ ಹೈಡ್ರಾಮಾ, ಅಮಿತ್ ಶಾ ಹೇಳಿದ್ದೇನು, ವಿವಾದ ಹೇಗೆ ಶುರುವಾಯಿತು 5 ಮುಖ್ಯ ಅಂಶಗಳು
Ambedkar row: ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಸಂಸತ್ ಆವರಣದಲ್ಲಿ ಹೈಡ್ರಾಮಾ ನಡೆದಿದೆ. ಇಷ್ಟಕ್ಕೂ ಅಮಿತ್ ಶಾ ಹೇಳಿದ್ದಾದರೂ ಏನು, ಹೇಗೆ ಶುರುವಾಯಿತು ವಿವಾದ, 5 ಮುಖ್ಯ ಅಂಶ ಹೀಗಿದೆ>
ಅಂಬೇಡ್ಕರ್ ವಿವಾದ; ಸಂಸತ್ ಆವರಣದಲ್ಲಿ ಹೈಡ್ರಾಮಾ, ರಾಹುಲ್ ಗಾಂಧಿ ತಳ್ಳಿದ್ದರಿಂದ ಐಸಿಯು ಸೇರಿದ ಬಿಜೆಪಿ ಸಂಸದ ಮುಕೇಶ್ ರಜಪೂತ್, ಆರೋಪ
Ambedkar row: ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಸಂಸತ್ನ ಮಕರ ದ್ವಾರವೇರಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಬಿಜೆಪಿ ಸದಸ್ಯರೂ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಹುಲ್ ಗಾಂಧಿ ತಳ್ಳಿದ್ದರಿಂದ ಬಿಜೆಪಿ ಸಂಸದ ಮುಕೇಶ್ ರಜಪೂತ್ ಐಸಿಯು ಸೇರಿದರು ಎಂಬ ಆರೋಪ ಕೇಳಿಬಂದಿದೆ. >
ಪರೀಕ್ಷಾ ಪೇ ಚರ್ಚಾ 2025: ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು; ನೋಂದಾಯಿಸಲು ಡೈರೆಕ್ಟ್ ಲಿಂಕ್ ಮತ್ತು ಇತರೆ ವಿವರ
Pariksha Pe Charcha 2025: ಪರೀಕ್ಷಾ ಪೇ ಚರ್ಚಾ 2025ರ ನೋಂದಣಿ ಶುರುವಾಗಿದ್ದು, ಜನವರಿ 14ರ ತನಕ ಹೆಸರು ನೋಂದಾಯಿಸಲು ಕಾಲಾವಕಾಶವಿದೆ. ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರು, ಪಾಲಕರೂ ಭಾಗವಹಿಸಬಹುದು. ಆದರೆ ಎಂಸಿಕ್ಯೂ ಪ್ರಶ್ನಾವಳಿಗೆ ಉತ್ತರಿಸಬೇಕು. ನೋಂದಾಯಿಸಲು ಡೈರೆಕ್ಟ್ ಲಿಂಕ್ ಮತ್ತು ಇತರೆ ವಿವರ ಇಲ್ಲಿದೆ.>
Credits : HTimes Kannada
Subscribe , Follow on
Facebook Instagram YouTube Twitter X WhatsApp